April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನೆರಿಯ: ರಸ್ತೆ ಬದಿಯ ಹುಲ್ಲುಗಾವಲಿಗೆ ಕಿಡಿಗೇಡಿಗಳಿಂದ ಬೆಂಕಿ

ಬೆಳ್ತಂಗಡಿ; ನೆರಿಯ ಗ್ರಾಮದ ದೇವಗಿರಿಯ ಪಾರಮಲೆ ಎಂಬಲ್ಲಿ ರಸ್ತೆ ಬದಿಯ ಹುಲ್ಲುಗಾವಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಎ.12 ರಂದು ರಾತ್ರಿ 11.30ಸುಮಾರಿಗೆ ಸಂಭವಿಸಿದೆ.
ಇಲ್ಲಿ ಸುಮಾರು ಹತ್ತು ಎಕ್ರೆ ಜಮೀನು ಬಂಡೆಕಲ್ಲುಗಳಿಂದ ವ್ಯಾಪಿಸಿದ್ದು ವ್ಯಾಪಕವಾಗಿ ಹುಲ್ಲು ಬೆಳೆದಿದೆ ಇಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಒಣಗಿರುವ ಹುಲ್ಲಿಗೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದಾರೆ.
ಇದರ ಸಮೀಪವೇ ಹಲವಾರು ಮನೆಗಳಿದ್ದು ತೋಟಗಳು ಇದೆ. ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಎಲ್ಲರೂ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಾರದೂ ತೋಟಗಳಿಗೆ ಬೆಂಕಿ ವ್ಯಾಪಿಸುವ ಮೊದಲು ಇದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಗಳು ರಾತ್ರಿಯ ವೇಳೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದು ಸ್ಥಳೀಯರು ಗಮನಿಸದೆ ಇರುತ್ತಿದ್ದರೆ ಭಾರೀ ದೊಡ್ಡ ಅನಾಹುತ ಸಂಭವಿಸುವ ಅಪಾಯವಿತ್ತು.
ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು.
ಇದೀಗ ಕಿಡಿಗೇಡಿಗಳು ಬೆಂಕಿ ಹಚ್ವಿರುವುದು ಸ್ಪಷ್ಟವಾಗಿ ಕಂಡು ಬಂದಿದ್ದು ಇಂತಹ ಸಮಾಜ ವಿರೋಧೀ ವ್ಯಕ್ತಿಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸುತ್ತಿದ್ದಾರೆ.

Related posts

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.‌ಸದಾನಂದ ಪೂಜಾರಿ ಯವರಿಗೆ ಡಾ. ಬಿಸಿ ರಾಯ್ ರಾಜ್ಯ ಪ್ರಶಸ್ತಿ,

Suddi Udaya

ಮಚ್ಚಿನ: ಆಕಸ್ಮಿಕವಾಗಿ ಮನೆಯ ಹಟ್ಟಿಗೆ ಬೆಂಕಿ : ಅಪಾರ ನಷ್ಟ

Suddi Udaya

ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ವಾರ್ಷಿಕ ಸಾಂಸ್ಕೃತಿಕ ದಿನಾಚರಣೆ

Suddi Udaya

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya
error: Content is protected !!