September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನೆರಿಯ: ರಸ್ತೆ ಬದಿಯ ಹುಲ್ಲುಗಾವಲಿಗೆ ಕಿಡಿಗೇಡಿಗಳಿಂದ ಬೆಂಕಿ

ಬೆಳ್ತಂಗಡಿ; ನೆರಿಯ ಗ್ರಾಮದ ದೇವಗಿರಿಯ ಪಾರಮಲೆ ಎಂಬಲ್ಲಿ ರಸ್ತೆ ಬದಿಯ ಹುಲ್ಲುಗಾವಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಎ.12 ರಂದು ರಾತ್ರಿ 11.30ಸುಮಾರಿಗೆ ಸಂಭವಿಸಿದೆ.
ಇಲ್ಲಿ ಸುಮಾರು ಹತ್ತು ಎಕ್ರೆ ಜಮೀನು ಬಂಡೆಕಲ್ಲುಗಳಿಂದ ವ್ಯಾಪಿಸಿದ್ದು ವ್ಯಾಪಕವಾಗಿ ಹುಲ್ಲು ಬೆಳೆದಿದೆ ಇಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಒಣಗಿರುವ ಹುಲ್ಲಿಗೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದಾರೆ.
ಇದರ ಸಮೀಪವೇ ಹಲವಾರು ಮನೆಗಳಿದ್ದು ತೋಟಗಳು ಇದೆ. ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಎಲ್ಲರೂ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಯಾರದೂ ತೋಟಗಳಿಗೆ ಬೆಂಕಿ ವ್ಯಾಪಿಸುವ ಮೊದಲು ಇದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಗಳು ರಾತ್ರಿಯ ವೇಳೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದು ಸ್ಥಳೀಯರು ಗಮನಿಸದೆ ಇರುತ್ತಿದ್ದರೆ ಭಾರೀ ದೊಡ್ಡ ಅನಾಹುತ ಸಂಭವಿಸುವ ಅಪಾಯವಿತ್ತು.
ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು.
ಇದೀಗ ಕಿಡಿಗೇಡಿಗಳು ಬೆಂಕಿ ಹಚ್ವಿರುವುದು ಸ್ಪಷ್ಟವಾಗಿ ಕಂಡು ಬಂದಿದ್ದು ಇಂತಹ ಸಮಾಜ ವಿರೋಧೀ ವ್ಯಕ್ತಿಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸುತ್ತಿದ್ದಾರೆ.

Related posts

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ: ಮಹಿಳೆಯ ಕಾಲಿನ ಮೇಲೆ ಹರಿದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅ28-ನ.3: ಕೊಕ್ಕಡದಲ್ಲಿ 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

Suddi Udaya

ಮದುವೆ ಸಮಾರಂಭದಲ್ಲಿ ಮೊಳಗಿದ ವಿಷ್ಣು ಸಹಸ್ರನಾಮ

Suddi Udaya

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ ಆಯ್ಕೆ

Suddi Udaya

ಬಿರು ಬೇಸಿಗೆಯಲ್ಲಿ ನೀರಿನ ಕೊರತೆಯ ನಡುವೆ ಕುಡಿಯುವ ನೀರನ್ನು ಪೂರೈಸಿ ಮಾದರಿ ಎನಿಸಿಕೊಂಡ ಲಾಯಿಲ ಗ್ರಾ.ಪಂ. ಸದಸ್ಯರು

Suddi Udaya
error: Content is protected !!