23.8 C
ಪುತ್ತೂರು, ಬೆಳ್ತಂಗಡಿ
May 21, 2025
ತಾಲೂಕು ಸುದ್ದಿ

ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್‌ರಿಂದ ಹೇವಾಜೆ ಶಾಲೆಗೆ ಯಾವುದೇ ಅನುದಾನ ಮಂಜೂರಾಗಿಲ್ಲ: ಮಾಹಿತಿ ಹಕ್ಕಿನಲ್ಲಿ ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಿಶಿಲ: 2022-23 ಮತ್ತು 2023- 24ನೇ ಸಾಲಿನಲ್ಲಿ ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿ ಪ್ರಸಾದ್ ಇವರ ಯೋಜನೆಯಡಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಲಿಖಿತ ಮಾಹಿತಿ ನೀಡಿದ್ದಾರೆ.


ಶಿಶಿಲ ಗ್ರಾಮದ ಪಡ್ಪು ಮನೆ ನಿವಾಸಿ ಕೊರಗಪ್ಪ ಗೌಡ ಇವರು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಮಾಹಿತಿಯನ್ನು ನೀಡಿದ್ದು, ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್‌ರವರು ಮಾಧ್ಯಮಗಳಿಗೆ ನೀಡಿದ ತಮ್ಮ ಪರಿಚಯದ ವಿವರದಲ್ಲಿ ವಿಧಾನ ಪರಿಷತ್ ಮತ್ತು ಸಂಸದರ ಸಂಪರ್ಕ ಮಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಅನುದಾನ ನೀಡಿದ ವಿವರ ನೀಡಿದ್ದರು. ಇದರಲ್ಲಿ ಶಿಶಿಲದ ಹೇವಾಜೆ ಶಾಲೆಗೆ ರೂ. 2ಲಕ್ಷ ಅನುದಾನ ಕೊಟ್ಟಿರುವುದಾಗಿ ನಮೂದಿಸಲಾಗಿದ್ದು, ಇದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಕೊರಗಪ್ಪ ಗೌಡರವರು ರಕ್ಷಿತ್ ಶಿವರಾಂ ಹೇವಾಜೆ ಶಾಲೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿರುವ ವಾಯ್ಸ್ ರೆಕಾರ್ಡ್ ಕೂಡಾ ನಂತರ ವೈರಲ್ ಆಗಿತ್ತು.
ಈ ಬಗ್ಗೆ ರಕ್ಷಿತ್ ಶಿವರಾಂ ಕಡೆಯಿಂದ ಮಂಜೂರಾತಿ ಪತ್ರ ನೀಡಿದ್ದನ್ನು ಸ್ಥಳೀಯ ಪತ್ರಿಕೆ ಪ್ರಕಟಿಸಿತ್ತು. ಇದರ ನಂತರದ ಬೆಳವಣಿಗೆಯಾಗಿ ಕೊರಗಪ್ಪ ಗೌಡರು ಮಾಹಿತಿ ಹಕ್ಕಿನಲ್ಲಿ ಈ ವಿವರನ್ನು ಕೇಳಿದ್ದು, ಬಿ.ಕೆ ಹರಿಪ್ರಸಾದ್‌ರವರಿಂದ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅಧಿಕಾರಿ ಕೊಟ್ಟಿರುವ ಲಿಖಿತ ಉತ್ತರ ಈಗ ಇದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

Related posts

ಮದ್ದಡ್ಕ ಪಲ್ಕೆ ಎಂಬಲ್ಲಿ ಮಾರಿ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ

Suddi Udaya

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಸಂಭ್ರಮ

Suddi Udaya

ಕಳೆಂಜ ಜನನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆಯ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಶಿಶಿಲ ಹಾ.ಉ.ಸ. ಸಂಘದ ಅಧ್ಯಕ್ಷರಾಗಿ ಸಂತೋಷ್ ಎ.ಎಸ್ ಹಾಗೂ ಉಪಾಧ್ಯಕ್ಷರಾಗಿ ಡಿ ಲಕ್ಷ್ಮೀಶ ಗೌಡ ಆಯ್ಕೆ

Suddi Udaya

ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಬ್ರಾಸ್ ಲೈಟ್: ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಬಳಂಜದ ಯುವಕ,ಉದ್ಯಮಿ ಜಗದೀಶ್ ಪೂಜಾರಿ ಪೆರಾಜೆ

Suddi Udaya
error: Content is protected !!