ಪಂಜಿಕಲ್ಲು ಕಜೆಬೈಲು ಶ್ರೀ ಪಿಲಿಚಾಮುಂಡಿ ದೈವದ ನೇಮದ ಪ್ರಯುಕ್ತ: ಮಧ್ಯಯಕ್ಷಕೂಟದ ವತಿಯಿಂದ ತಾಳಮದ್ದಳೆ

Suddi Udaya

ಪುಂಜಾಲಕಟ್ಟೆ : ಪಂಜಿಕಲ್ಲು ಗ್ರಾಮದ ಕಜೆಬೈಲು ಶ್ರೀ ಪಿಲಿಚಾಮುಂಡಿ ದೈವದ ನೇಮದ ಪ್ರಯುಕ್ತ ಮಧ್ಯಯಕ್ಷಕೂಟದ ವತಿಯಿಂದ, ಕಜೆಬೈಲು ಶ್ರೀ ಪಿಲಿಚಾಮುಂಡಿ ಫ್ರೆಂಡ್ಸ್ ಸಹಕಾರದಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಬುಡೋಳಿ‌ ಉದ್ಘಾಟಿಸಿದರು.

ನಂತರ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ, ಪೌರಾಣಿಕ ಪ್ರಜ್ಞೆ ಮೂಡಿಸುವ, ಸಮಾಜಮುಖಿ ಚಿಂತನೆ ನೀಡುವ ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಯಕ್ಷಗಾನವನ್ನು ಬೆಳೆಸುವಲ್ಲಿ ನಿರಂತರ ಕಾರ್ಯಕ್ರಮ ನೀಡುವ ಮಧ್ಯ ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಬಂಟ್ವಾಳ ತುಳು ಕೂಟ ಅಧ್ಯಕ್ಷ ಸುದರ್ಶನ್ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ದೈವ ಪಾತ್ರಿ ಪದ್ಮರಾಜ ಜೈನ್ ಪಡುಕೋಣಾಜೆ, ಕಾರಿಂಜ ಯಕ್ಷವಾಸ್ಯಮ್ ಇದರ ಸಂಚಾಲಕಿ ಸಾಯಿಸುಮಾ ನಾವಡ, ಕಜೆಬೈಲು ನೇಮ ಸಮಿತಿ ಪ್ರಮುಖರಾದ ಸಂಜೀವ ಶೆಟ್ಟಿ ಪಂಜಿಕಲ್ಲು ಹಾ.ಉ.ಸಂಘದ ಕಾರ್ಯದರ್ಶಿ ದೇವಪ್ಪ ಕುಲಾಲ್‌, ಕಜೆಬೈಲು ಶ್ರೀ ಪಿಲಿಚಾಮುಂಡಿ ಫ್ರೆಂಡ್ಸ್ ಅಧ್ಯಕ್ಷ ದೀಪಕ್ ಪೂಜಾರಿ, ಹಿರಿಯ ಅರ್ಥಧಾರಿ ತಿಮ್ಮಪ್ಪ ಶೆಟ್ಟಿ ಪಾತಿಲ, ಯಕ್ಷ ಕೂಟ ಸಮಿತಿ ಪದಾಧಿಕಾರಿಗಳಾದ ಸುಜಾತಾ ಶೆಟ್ಟಿ ಯುವರಾಜ ಶೆಟ್ಟಿ ಶುಭಾಶಯ್ ಶೆಟ್ಟಿಕುಸುಮಾ ರಘುರಾಮ
ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ದೇವಪ್ಪ ಕುಲಾಲ್ ವಂದಿಸಿದರು.

ಪಿಲಿಚಾಮುಂಡಿ ದೈವ: ಈ ಸಂದರ್ಭದಲ್ಲಿ ದೈವಕ್ಕೆ ಹಗಲು ನೇಮ ಹಾಗೂ ರಾತ್ರಿ ಮಂತ್ರದೇವತೆಗೆ ಕೋಲ ಬಲಿ ಸೇವೆ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್‌ ನ್ಯಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತಿತರ ಗಣ್ಯರು ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು. ಪ್ರಮುಖರಾದ ಸಂಜೀವ ಶೆಟ್ಟಿ, ಸುದರ್ಶನ್ ಜೈನ್, ದೇವಪ್ಪ ಕುಲಾಲ್‌, ಭಾಸ್ಕರ ಶೆಟ್ಟಿ
ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!