ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಎ.14ರಿಂದ ಪ್ರಾರಂಭಗೊಂಡು ಎ.23 ರವರೆಗೆ ಜರುಗಲಿದೆ.
ಇಂದು ಎ.14ರಂದು ಬೆಳಿಗ್ಗೆ ಪುಣ್ಯಾಹಃ, ಗಣಹೋಮ, ತೋರಣ ಮುಹೂರ್ತ, ಏಕಾದಶ, ರುದ್ರಾಭಿಷೇಕ, ನವಕ ಪ್ರಧಾನ, ಕಂಕಣಬಂಧ ., ಧ್ವಜಾರೋಹಣ, ಮಹಾಪೂಜೆ ನಡೆಯಿತು.
ಸಂಜೆ ಭಜನೆ, ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ , ರಂಗಸೇವೆ ನಡೆಯಲಿದೆ.
ಎ.16 ರಂದು ಅಪರಾಹ್ನ 3.00ಕ್ಕೆ ಕುಕ್ಕೇಡಿ-ನಿಟ್ಟಡೆ, ಕರಿಮಣೇಲು-ಮೂಡುಕೋಡಿ, ವೇಣೂರು, ಬಜಿರೆ, ಗುಂಡೂರಿ ಗ್ರಾಮಸ್ಥರಿಂದ ಹಸಿರುವಾಣಿ ಹೊರಕಾಣಿಕೆ ನಡೆಯಲಿದೆ.