ಮಚ್ಚಿನ: ಶ್ರೀ ಸತ್ಯಚಾವಡಿ ಮನೆ ಮಾನ್ಯ ತರವಾಡು ಮನೆಯ ಗೃಹಪ್ರವೇಶ ಹಾಗೂ ಧರ್ಮದೈವ ಶ್ರೀ ಧೂಮವತಿ, ಬಂಟ ಪರಿವಾರ ದೈವಗಳು ಮತ್ತು ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎ.30 ರಿಂದ ಮೇ.3 ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಎ.20 ರಂದು ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಎಲ್ಲರ ಸಹಕಾರ ಕೋರಲಾಯಿತು.
ತರವಾಡು ಮನೆಯ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಈಗಾಗಲೇ ಹೆಚ್ಚಿನ ಕೆಲಸ ಪೂರ್ಣಗೊಂಡಿದೆ.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಚಿಪ್ಲುಕೋಟೆ, ಆಡಳಿತ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೋಜರಾಜ ಬಂಗೇರ ಮಾನ್ಯ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಯೋಗೀಶ್ ಕಡ್ತಿಲ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ ಜೆಂಕ್ಯಾರು, ಜೀರ್ಣೋದ್ಧಾರದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಮಾನ್ಯ ತರವಾಡು ಮನೆಯ ಹಿರಿಯರಾದ ಸಂಜೀವ ಪೂಜಾರಿ, ಆಡಳಿತ ಮಂಡಳಿಯ ಗೌರವಾಧ್ಯಕ್ಷ ದಿನಕರ ಪೂಜಾರಿ ಕಡ್ತಿಲ, ಬ್ರಹ್ಮಕಲಶೋತ್ಸವ ಸಮಿತಿ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶ್ರೀಮತಿ ಪೂರ್ಣಿಮಾ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹೇಶ್ ಜೆಂಕ್ಯಾರು, ಕೋಟ್ಯಾನ್ ಬರಿಯ ಹಿರಿಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.