23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿರಾಜಕೀಯರಾಜ್ಯ ಸುದ್ದಿ

ಕೆ. ಪಿ. ಸಿ. ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಕೆ. ಪಿ. ಸಿ. ಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ್‌ರವರು ಎ.22ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಡಿ. ಸುರೇಂದ್ರ ಕುಮಾರ್ ಸ್ವಾಗತಿಸಿದರು.

ಈ ಸಂದರ್ಭ ಕೆ. ಪಿ. ಸಿ. ಸಿ ಮಾಧ್ಯಮ ವಕ್ತಾರರು, ಕೊಪ್ಪ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನ್ಯಾಯವಾದಿ ಸುಧೀರ್ ಕುಮಾರ್, ಮರೊಳ್ಳಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ, ಎ. ಐ. ಸಿ. ಸಿ ವೀಕ್ಷಕರಾದ ಶಾಸಕ ಸಂಜೀವ್ ಜೋಸೆಫ್ , ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಕೆ. ಪಿ. ಸಿ. ಸಿ ಸಂಯೋಜಕರಾದ ಶಾಹಿದ್ ತೆಕ್ಕಿಲ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.

Related posts

ಮುಂಡ್ರುಪಾಡಿ: ದ.ಕ.ಜಿ.ಪಂ.ಸ.ಕಿ.ಪ್ರಾ. ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

Suddi Udaya

ಪಟ್ರಮೆ ಶಕ್ತಿಕೇಂದ್ರದ ಬಿಜೆಪಿ ಕಾರ್ಯಕರ್ತರಿಂದ ಮತ ಪ್ರಚಾರ

Suddi Udaya

ನಿಡಿಗಲ್: ರಾ.ಹೆದ್ದಾರಿಯಲ್ಲಿ ಮೂರು ದಿನದಿಂದ ಅನಾಥವಾಗಿ ನಿಂತ ಬೈಕ್: ವಾರುಸುದಾರನ ಪತ್ತೆಯಿಲ್ಲ ನಾಗರೀಕರಲ್ಲಿ ಸಂಶಯ

Suddi Udaya

ವೇಣೂರು: ‘ಮಿನ್ಹಾಜುಲ್ ಹುದಾ’ ವತಿಯಿಂದ ಉಚಿತ ವಿವಾಹ

Suddi Udaya

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಪ್ರಕೃತಿ ವಿಕೋಪಕ್ಕೆ ಹಾನಿಯಾಗಿರುವ ಮನೆಗಳಿಗೆ ಭೇಟಿ

Suddi Udaya

ಧರ್ಮಸ್ಥಳ “ಹೆಜ್ಜೆ ಗುರುತು” ತಂಡದಿಂದ ಶ್ರಮದಾನ

Suddi Udaya
error: Content is protected !!