25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ನಿಷೇದಿತ ಮಾದಕ ವಸ್ತು ಗಾಂಜಾ ಸೇವಿಸಿ ಸಾವ೯ಜನಿಕ ಸ್ಥಳದಲ್ಲಿ ಅಸಭ್ಯವಾಗಿ ವತ೯ನೆ : ನಾಲ್ಕು ಮಂದಿಯ ಬಂಧನ

ವೇಣೂರು: ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿ ಸಾವ೯ಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ನಾಲ್ಕು ಮಂದಿಯನ್ನು ವೇಣೂರು ಪೊಲೀಸರು ವಶಕ್ಕೆ ಪಡೆದ ಪ್ರಕರಣ ಎ.23 ರಂದು ವರದಿಯಾಗಿದೆ.
ಶ್ರೀಶೈಲ ದುಂಡಪ್ಪ ಮುರಗೋಡು ಪೊಲೀಸ್ ಉಪ ನಿರೀಕ್ಷಕರು ವೇಣೂರು ತನ್ನ ಸಿಬ್ಬಂದಿಯವ
ರೊಂದಿಗೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ, ಎ. 23 ರಂದು ಬೆಳಗ್ಗಿನ ಜಾವ 5 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ವೇಣೂರು ಕೆಳಗಿನ ಪೇಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಆರೋಪಿತರುಗಳಾದ ಕೆ.ಆರ್ ಪುರಂ ಬೆಂಗಳೂರು ಗ್ರಾಮಾಂತರದ ವಾರಣಾಸಿ ಗ್ರಾಮದ ನಿವಾಸಿಗಳಾದ ಗೌರಿಶಂಕರ್ ಆರ್(19 ವರ್ಷ), ವಿಶ್ವಾಸ್ ,ಮನು ಪಿ(19 ವರ್ಷ), ಅಭಿ ಕೆ.ಎಲ್( 19 ವರ್ಷ), ಮೋಹನ್ ರಾಜ್ ಎಸ್(18 ವರ್ಷ) ಟಾಟಾ ಕ್ವಾಲಿಸ್‌ ಕಾರನ್ನು ನಿಲ್ಲಿಸಿ ಯಾವುದೋ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ವಿಚಾರಿಸಲಾಗಿ ಆರೋಪಿತರುಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದಾಗಿ ತಪ್ಪೊಪ್ಪಿಕೊಂಡರೆನ್ನಲಾಗಿದೆ.
ಆರೋಪಿತರನ್ನು ವಶಕ್ಕೆ ಪಡೆದು ಕಾರನ್ನು ಸ್ವಾಧೀನಪಡಿಸಿ, ಆರೋಪಿತರುಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದು ದೃಢಪಟ್ಟಿದ್ದು, ಆರೋಪಿತರುಗಳ ವಿರುದ್ಧ ಸ್ವ-ಫಿರ್ಯಾದಿಯನ್ನು ತಯಾರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಕುಕ್ಕೇಡಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ಪ್ರಕರಣ: ಮಾಲಕ ಸೈಯ್ಯದ್ ಬಶೀರ್ ಪೊಲೀಸ್ ವಶ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಮದ್ದಡ್ಕ ಸಮೀಪ ನೇರಳಕಟ್ಟೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಅಂದಾಜು 56 ಗ್ರಾಂ ಚಿನ್ನಾಭರಣ ಕಳವುಗೈದು ಪರಾರಿಯಾದ ಕಳ್ಳರು

Suddi Udaya

ಯೂಟ್ಯೂಬರ್ ಸಮೀರ್ ಎಮ್.ಡಿ ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಮಂಗಳೂರಿಗೆ

Suddi Udaya
error: Content is protected !!