April 2, 2025
ನಿಧನವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆ ಸುಮಾರು 25 ವಷ೯ಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ನಾರಾಯಣ ಪ್ರಭು ನಿಧನ

ಬೆಳ್ತಂಗಡಿ: ಕಲ್ಮಂಜ‌ ಗ್ರಾಮದ ನಿಡಿಗಲ್ ನಿವಾಸಿ ಪ್ರಸ್ತುತ ಧರ್ಮಸ್ಥಳದಲ್ಲಿ ವಾಸವಾಗಿರುವ ಡಾ.ನಾರಾಯಣ ಪ್ರಭು (68)ಅಲ್ಪಕಾಲದ ಅಸೌಖ್ಯದಿಂದ ಏ. 22ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆ ವಿಭಾಗದಲ್ಲಿ ಸುಮಾರು 25 ವರ್ಷಕ್ಕೂ ಅಧಿಕ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸಂಚಾರಿ ವೈದ್ಯ ಎಂದು ಖ್ಯಾತರಾಗಿದ್ದ ,ಎರಡು ಲಕ್ಷಕ್ಕೂ ಮಿಕ್ಕಿ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದರು.

ಇವರ ಕುಟುಂಬದ ಆಡಳಿತದಲ್ಲಿರುವ ನಿಡಿಗಲ್ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

Related posts

ಕೊಕ್ಕಡ : ಸಾಧಕ ಡೇವಿಡ್ ಬೈಜು ರವರ ಮನೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ಚಂದರ್ ಶಾಜಿ ಮ್ಯಾಥ್ಯೂ ಭೇಟಿ

Suddi Udaya

ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

Suddi Udaya

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya

ನೆರಿಯ: ಅಣಿಯೂರು ನಿವಾಸಿ ಇಂದಿರಾ ನಿಧನ

Suddi Udaya

ಉಜಿರೆ: ಮಾಚಾರಿನಲ್ಲಿ ಎಸ್‌ವೈಎಸ್ 30 ನೇ ವಾರ್ಷಿಕ ಪ್ರಚಾರಾರ್ಥ ಕಾರ್ಯಕ್ರಮ

Suddi Udaya

ಪಣಕಜೆ : ಕಾರು ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರ ಅಪಾಯದಿಂದ ಪಾರು

Suddi Udaya
error: Content is protected !!