September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು: ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚಾರಿಸದಂತೆ ಮರದ ತಡೆಗೋಡೆ ನಿರ್ಮಾಣ

ನಾವೂರು: ನಿಷೇಧದ ನಡುವೆಯೂ ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ , ನಡ ಗ್ರಾಮದ ಬಳ್ಳಿತೋಟ- ಬೋಜಾರ- ಮುಡಾಯಿಬೆಟ್ಟು ಸಂಪರ್ಕದ ರಸ್ತೆಯಲ್ಲಿರುವ ಶಿಥಿಲವಾದ ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚಾರಿಸದಂತೆ ಮರದ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ಕೈಕಂಬ ಸೇತುವೆ ಶಿಥಿಲವಾಗಿದ್ದು , ಸದರಿ ಸೇತುವೆಯಲ್ಲಿ ಘನ ವಾಹನ ಸಂಚಾರ ಮಾಡದಂತೆ ನಿಷೇಧಿಸಿ ನಾವೂರು ಗ್ರಾಮ ಪಂಚಾಯತ್ ಸೇತುವೆ ಬಳಿಕ ಫಲಕ ಅಳವಡಿಸಿತ್ತು. ಆದರೂ ಕೆಲವೊಂದು ಘನ ವಾಹನಗಳು ಸೇತುವೆ ಮೇಲೆ ಸಂಚಾರ ಮಾಡುವ ಬಗ್ಗೆ ಜು. 8 ರಂದು ನಾವೂರು ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ಎಚ್ಚೆತ್ತ ಗ್ರಾಮ ಪಂಚಾಯತ್ ಆಡಳಿತ ಇಂದು ಘನ ವಾಹನ ಸಂಚಾರಿಸದಂತೆ ತಡೆಯಲು ಮರದ ತಡೆಗೋಡೆ ನಿರ್ಮಾಣ ಮಾಡಿದೆ. ಜೊತೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ.

Related posts

ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಸಂಚಾರ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

Suddi Udaya

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಗುರುವಾಯನಕೆರೆ: ಗಲಾಟೆ ವಿಚಾರದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು: ಲೋನ್ ಪೈಲ್ ವಿಚಾರದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಮಾತುಕತೆ, ಸಂಸ್ಥೆಯ ಮಾಲಕನಿಂದ ಹಲ್ಲೆ

Suddi Udaya

ನಾವೂರು ಪರಾರಿ ನಿವಾಸಿ ತುಂಗಮ್ಮ ನಿಧನ

Suddi Udaya

ಉಜಿರೆ: ಕೊಳ್ತಿಗೆ ಯಕ್ಷಯಾನ 60 ಗ್ರಂಥ ಲೋಕಾರ್ಪಣೆ-ಸನ್ಮಾನ-ತಾಳಮದ್ದಳೆ

Suddi Udaya
error: Content is protected !!