April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ವೈದ್ಯಕೀಯ ನೆರವು: ಅನಾರೋಗ್ಯದಿಂದ ಬಳಲುತ್ತಿರುವ ಮಾನ್ಯಳ ಚಿಕಿತ್ಸೆಗೆ ಸ್ಪಂದನೆ

ಬೆಳ್ತಂಗಡಿ: ಉದಯ ಪೂಜಾರಿ ಬಳ್ಳಾಲ್ ಬಾಗ್ ಸ್ಥಾಪಕ ಅಧ್ಯಕ್ಷತೆಯ ಬಿರುವೆರ್ ಬೆಳ್ತಂಗಡಿ ಘಟಕವೂ ಹಲವಾರು ಬಡ ಕುಟುಂಬಕ್ಕೆ ಸಹಕಾರವನ್ನು ನೀಡುತ್ತಾ ಬ್ರಹ್ಮ ಶ್ರೀ ಸೇವಾ ನಿಧಿಯಿಂದ 47ನೇ ಸೇವಾ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪರೋಡಿತ್ತಾಯಕಟ್ಟೆ ಬಳಿಯ ಮಾನ್ಯ ಳ ಮನೆಗ ಬೇಟಿ ನೀಡಿ ನೀಡಲಾಯಿತು.

ಮಾನ್ಯಳು ಸುಮಾರು 6 ವರ್ಷ ಪ್ರಾಯದವಳಾಗಿದ್ದು ,ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಮಾನ್ಯಳ ಕುಟುಂಬದಲ್ಲಿ ತಂದೆ ಕೆಲಸಕ್ಕೆ ಹೋಗುತ್ತಿದ್ದು,ತಾಯಿ ಮಾನ್ಯಳ ಆರೈಕೆಯಲ್ಲಿ ತೊಡಗಿರುತ್ತಾರೆ.ಮಾನ್ಯಳ ಮುಂದಿನ ಆರೋಗ್ಯಕ್ಕೆ ವೆಚ್ಚ ಭರಿಸಲು ಸಾಧ್ಯವಾಗದೇ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕಕ್ಕೆ ಮನವಿ ನೀಡಿರುತ್ತಾರೆ ಈ ಕೂಡಲೇ ಮಾನ್ಯಳ ಮನೆಯ ಸಮಸ್ಯೆಯನ್ನು ಅರಿತ ಬಿರುವೆರ್ ಕುಡ್ಲ ಘಟಕವೂ ಎಲ್ಲಾ ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ರೂ.15 ಸಾವಿರ ಸಹಾಯಧನ ಚೆಕ್ಕ್ ನ್ನು ಸುವರ್ಣ ಪ್ರತಿಷ್ಠಾನ ಮುಖ್ಯಸ್ಥರಾದ ಸಂಪತ್.ಬಿ ಸುವರ್ಣ ಇವರು ನೀಡಿದರು .ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಉಜಿರೆ ,ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಮದ್ದಡ್ಕ,ಶ್ರೀ ಕೊಯ್ಯೂರು ಹಾಗೂ ಪವನ್ ಕಟ್ಟೆ ಉಪಸ್ಥಿತರಿದ್ದರು

Related posts

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜು: ಸ್ಕಾರ್ಫ್ ಡೇ ಆಚರಣೆ

Suddi Udaya

ಕಡಿರುದ್ಯಾವರ ಬಿಜು ತೋಮಸ್ ರವರ ಬಾಳೆ ಕೃಷಿ ಗಾಳಿ ಮಳೆಗೆ ಸರ್ವನಾಶ

Suddi Udaya

ಮುಂಡೂರುನಲ್ಲಿ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 4ನೇ ನೂತನ ಮುಂಡೂರು ಶಾಖೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಡಿ.29: ಬಳ್ಳಮಂಜದಲ್ಲಿ ಶೇಷ-ನಾಗ ಜೋಡುಕರೆ ಕಂಬಳ

Suddi Udaya

ನಿಡ್ಲೆ ಗ್ರಾ.ಪಂ. ನಲ್ಲಿ ವಿಕಲಚೇತನರ ಗ್ರಾಮ ಸಭೆ

Suddi Udaya
error: Content is protected !!