22.9 C
ಪುತ್ತೂರು, ಬೆಳ್ತಂಗಡಿ
March 7, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿ

ಹೆದ್ದಾರಿ ಬದಿ ಬೆಂಕಿ

ಉಜಿರೆ: ಮುಂಡಾಜೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಪು ಬಳಿ ವಿದ್ಯುತ್ ಲೈನ್ ನಿಂದ ಕಿಡಿಗಳು ಹಾರಿದ ಪರಿಣಾಮ ಬೆಂಕಿ ಹರಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಅರಣ್ಯ ಇಲಾಖೆಯ ಕಾಪು ಸಸ್ಯ ಕ್ಷೇತ್ರದ ಸಮೀಪವೇ ಬೆಂಕಿ ಅವಘಡ ನಡೆದಿದೆ. ಸಮಾಜ ಸೇವಕ ಸಚಿನ್ ಭಿಡೆ ಹಾಗೂ ಸಸ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರು ತಕ್ಷಣ ಕಾರ್ಯಪ್ರವರ್ತರಾಗಿ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಬೆಂಕಿ ಆರಿಸಲು ತಡವಾಗುತ್ತಿದ್ದರೆ ಸಸ್ಯಕ್ಷೇತ್ರದ ಒಳಗೂ ನುಗ್ಗಿ ಮಳೆಗಾಲದ ವಿತರಣೆಗೆ ಸಿದ್ಧವಾಗುತ್ತಿರುವ ನಾನಾ ಜಾತಿಯ ಹಲವು ಸಾವಿರ ಗಿಡಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇತ್ತು.

Related posts

ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹುಟ್ಟೂರಿನತ್ತ ವಸಂತ ಬಂಗೇರ ಮೃತದೇಹ; ನಾಳೆ ಬೆಳಗ್ಗೆ 4 ಗಂಟೆಗೆ ಬೆಳ್ತಂಗಡಿ ನಿವಾಸಕ್ಕೆ ಪಾರ್ಥೀವ ಶರೀರ ಆಗಮನ

Suddi Udaya

ಮಚ್ಚಿನ: ಶ್ರೀ ವಿದ್ಯಾಸಾಗರ ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಎಸ್. ಎಸ್.ಎಲ್. ಸಿ ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆದು ಶಾರಾನ್ ಡಿಸೋಜಾ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್.

Suddi Udaya

ಲಾಯಿಲ: ಗುರಿಂಗಾನ ಸೇತುವೆ ಹಾನಿಗೊಳಗಾಗಿದ್ದು ಸ್ಥಳಕ್ಕೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ: ಹೆಚ್ಚುವರಿ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Suddi Udaya

ಅ.24: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!