23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

ಉಜಿರೆ: ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳ ಒಟ್ಟು ನಾಲ್ವರು ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘವು ನೀಡುವ ಮಾಮ್ ಇನ್ಸ್ಪೈರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮಾಧ್ಯಮದ ವಿವಿಧ ವಲಯಗಳಿಗೆ ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ ಯಾದವ್, ಶ್ಯಾಮಪ್ರಸಾದ್ ಎಚ್.ಪಿ (ಪತ್ರಿಕೋದ್ಯಮ ಪದವಿ ವಿಭಾಗ), ಚೈತ್ರಾ ರಾವ್, ಸ್ವಸ್ತಿಕ್ ಕನ್ಯಾಡಿ (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗ) ನೀಡಿದ ಪ್ರತಿಭಾನ್ವಿತ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯ ಆಯ್ಕೆಗಾಗಿಯೇ ಮಾಧ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘವು ಅನುಭವಿ ಮಾಧ್ಯಮ ವೃತ್ತಿಪರರು ಹಾಗೂ ಪ್ರಾಧ್ಯಾಪಕರನ್ನು ಒಳಗೊಂಡ ವಿಶೇಷ
ಸಮಿತಿಯನ್ನು ರಚಿಸಿತ್ತು. ಈ ವಿಶೇಷ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳ ಪ್ರಕಟಿತ ಬರಹಗಳು, ಟೆಲಿವಿಷನ್-ರೇಡಿಯೋದಲ್ಲಿ ಪ್ರಸಾರವಾದ ಕಾರ್ಯಕ್ರಮಗಳು, ಸಂಶೋಧನಾ ಲೇಖನಗಳು, ಸಾರ್ವಜನಿಕ ಸಂಪರ್ಕ ನೈಪುಣ್ಯತೆ, ನವಮಾಧ್ಯಮಗಳಲ್ಲಿ ಕೌಶಲ್ಯಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಲಭಿಸಿದ್ದು, ಇವರಲ್ಲಿ ನಾಲ್ವರು ಎಸ್.ಡಿ.ಎಂ ಕಾಲೇಜಿನವರೇ ಆಗಿದ್ದಾರೆ. ಮುಖ್ಯವಾಹಿನಿ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿ ತಮ್ಮದೇ ಹೆಗ್ಗುರುತು ಮೂಡಿಸುತ್ತಿರುವ ಎಸ್.ಡಿ.ಎಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳ ಪರಂಪರೆಯನ್ನು ಮಾಮ್ ಪ್ರಶಸ್ತಿಯು ಎತ್ತಿಹಿಡಿದಂತಾಗಿದೆ. ಈ ಪ್ರಶಸ್ತಿಯು ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅವರು ತಿಳಿಸಿದ್ದಾರೆ.

Related posts

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಆರಂಬೋಡಿ ದ.ಕ.ಜಿ.ಪಂ.ಉ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ ಯೋಜನೆಯ‌ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಒಮ್ನಿ ಕಾರಿಗೆ ಲಾರಿ ಡಿಕ್ಕಿ : ಸ್ಥಳದಲ್ಲೇ ನಾಲ್ಕು ಮಂದಿ ಸಾವು

Suddi Udaya

ವೇಣೂರು ಐಟಿಐ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya
error: Content is protected !!