September 6, 2026
ವರದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ರವರಿಗೆ ಶ್ರದ್ಧಾಂಜಲಿ

ಉಜಿರೆ :ನಿಸ್ವಾರ್ಥ ಸೇವೆಯಿಂದ ವೈದ್ಯ ವೃತ್ತಿಯ ಗೌರವ ಹೆಚ್ಚಿಸಿದವರು ಡಾ. ನಾರಾಯಣ ಪ್ರಭು. ಇವರು ಹಳ್ಳಿಯ ಅನಾನೂಕುಲ ಪರಿಶ್ಥಿಯಲ್ಲಿಯೂ ಸಂಚಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಬಡ ಜನತೆಯ ಆರೋಗ್ಯ ಕಾಪಾಡಿದವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಚತುರ್ದಾನಗಳಲ್ಲಿ ಒಂದಾದ ಔಷಧ ದಾನವನ್ನು ಸಮರ್ಪಕವಾಗಿ ಜನತೆಗೆ ಮುಟ್ಟಿಸಲು ಶ್ರಮಿಸಿದವರು ಎಂದು ಎಂ. ಜನಾರ್ದನ್ ಹೇಳಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರು ಮಾತನಾಡಿದರು. ಮತ್ತೋರ್ವ ಹಿರಿಯ ವೈದ್ಯರಾದ ಡಾ. ಬಾಲಕೃಷ್ಣ ಭಟ್ ಅವರು ಡಾ. ನಾರಾಯಣ ಪ್ರಭು ಅವರ ಅನುಪಸ್ಥಿಯಲ್ಲಿ ತಾನು ಸಂಚಾರಿ ಆಸ್ಪತ್ರೆಯ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್. ಪಿ, ಫಿಸಿಷಿಯನ್ ಡಾ. ಸಾತ್ವಿಕ್ ಜೈನ್, ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ವರದಿ: ನಾರಾಯಣ. ಬಿ

Related posts

ಉಜಿರೆ: ಗುರಿಪಳ್ಳ ನಿವಾಸಿ ಶ್ರದ್ಧಾ ಶೆಟ್ಟಿ ನಿಧನ

Suddi Udaya

ಜೂ.14: ಅಳದಂಗಡಿಯಲ್ಲಿ 24ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ – ಕಂಪ್ಯೂಟರ್ ವಿತರಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಕಾನೂನು ಅರಿವು ಕಾರ್ಯಕ್ರಮ

Suddi Udaya

ವಿಕಲಚೇತನ ಯುವಕನ ಸ್ವಾವಲಂಬನೆಯ ಹೆಜ್ಜೆ: ರಾಕೇಶ್ ಹೆಗ್ಡೆ ಅವರಿಂದ ಚಿರು ಟೀಮ್’ ಜರ್ಸಿ ಅನಾವರಣ

Suddi Udaya

ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಮಹಾಪರ್ವ” ರಿಯಾಯಿತಿ ಮೇಳ

Suddi Udaya
error: Content is protected !!