April 2, 2025
ವರದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ರವರಿಗೆ ಶ್ರದ್ಧಾಂಜಲಿ

ಉಜಿರೆ :ನಿಸ್ವಾರ್ಥ ಸೇವೆಯಿಂದ ವೈದ್ಯ ವೃತ್ತಿಯ ಗೌರವ ಹೆಚ್ಚಿಸಿದವರು ಡಾ. ನಾರಾಯಣ ಪ್ರಭು. ಇವರು ಹಳ್ಳಿಯ ಅನಾನೂಕುಲ ಪರಿಶ್ಥಿಯಲ್ಲಿಯೂ ಸಂಚಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಬಡ ಜನತೆಯ ಆರೋಗ್ಯ ಕಾಪಾಡಿದವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಚತುರ್ದಾನಗಳಲ್ಲಿ ಒಂದಾದ ಔಷಧ ದಾನವನ್ನು ಸಮರ್ಪಕವಾಗಿ ಜನತೆಗೆ ಮುಟ್ಟಿಸಲು ಶ್ರಮಿಸಿದವರು ಎಂದು ಎಂ. ಜನಾರ್ದನ್ ಹೇಳಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರು ಮಾತನಾಡಿದರು. ಮತ್ತೋರ್ವ ಹಿರಿಯ ವೈದ್ಯರಾದ ಡಾ. ಬಾಲಕೃಷ್ಣ ಭಟ್ ಅವರು ಡಾ. ನಾರಾಯಣ ಪ್ರಭು ಅವರ ಅನುಪಸ್ಥಿಯಲ್ಲಿ ತಾನು ಸಂಚಾರಿ ಆಸ್ಪತ್ರೆಯ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್. ಪಿ, ಫಿಸಿಷಿಯನ್ ಡಾ. ಸಾತ್ವಿಕ್ ಜೈನ್, ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ವರದಿ: ನಾರಾಯಣ. ಬಿ

Related posts

ವಿಧಾನಸಭೆಯ ಕಲಾಪದಲ್ಲಿ ದ.ಕ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬಂದಾರು: ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಗುರುವಾಯನಕೆರೆ ವ್ಯಾಪ್ತಿಯಲ್ಲಿ ದಾಖಲೆಗಳಿದ್ದ ಪರ್ಸ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ ಹಾಗೂ ನಿರ್ದೆಶಕ ತರುಣ್ ಸುಧೀರ್ ದಂಪತಿ ಭೇಟಿ

Suddi Udaya

ಭತ್ತದ ಸಾಂಪ್ರದಾಯಿಕ ತಳಿಗಳ ಸಂರಕ್ಷಕ ಸಾವಯವ ಕೃಷಿಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಬಿ.ಕೆ ದೇವರಾವ್ ರಿಗೆ ಬೆಳ್ತಂಗಡಿ ತಾಲೂಕು ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಬೆಳ್ತಂಗಡಿಯಲ್ಲಿ ಹೊಸದಾಗಿ “ಲಿಯೋ ಕ್ಲಬ್” ಯುವ ವಿಭಾಗ ಉದ್ಘಾಟನೆ

Suddi Udaya
error: Content is protected !!