April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೇಸಿಗೆ ಶಿಬಿರ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ 4ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎ. 28 ರಿ೦ದ ಪ್ರಾರಂಭಗೊಂಡು ಮೇ 02ರ ವರೆಗೆ ಜೆಸಿ ಭವನ ಬೆಳ್ತಂಗಡಿಯಲ್ಲಿ ಬೇಸಿಗೆ ಶಿಬಿರ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಹಿಂದುಳಿದ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕರು ಚಂದ್ರಪ್ಪ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಕನ್ನಡ ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ, ಜೆ.ಜೆ.ಸಿ ಅಧ್ಯಕ್ಷರು ಜೆ.ಜೆ.ಸಿ ರಾಮಕೃಷ್ಣ ಶರ್ಮಾ, ಅಧ್ಯಕ್ಷರು ಜೆಸಿಹೆಚ್ ಜಿ ಎಫ್ ಶಂಕರ್ ರಾವ್., ನಿಕಟ ಪೂರ್ವ ಅಧ್ಯಕ್ಷರು ಜೆ.ಎಫ್.ಎಮ್ ಪ್ರಸಾದ್ ಬಿ. ಎಸ್, ಕಾರ್ಯದರ್ಶಿ ಜೆಸಿ ಸುಧೀರ್ ಕೆ. ಎನ್., ಬೇಸಿಗೆ ಶಿಬಿರದ ಸಂಯೋಜಕರು ಜೆ.ಎಫ್.ಎಮ್ ಹೇಮಾವತಿ ಕೆ., ಮಹಿಳಾ ಸಂಯೋಜಕಿ ಜೆಸಿ ಮಮಿತಾ ಸುಧೀರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಕ್ರಾಫ್ಟ್, ಚಿತ್ರಕಲೆ, ಕೊಲಾಜ್ ಗ್ರೀಟಿಂಗ್ ಕಾರ್ಡ್ ತಯಾರಿಕೆ, ಕೇ ಮಾದರಿ ತಯಾರಿ, ಕ್ರಿಯಾನ್ ವರ್ಕ್ಸ್, ಹಾಡು, ಮನೋರಂಜನಾ ಆಟಗಳು, ಜೀವನ ಕೌಶಲ್ಯ ತರಬೇತಿಗಳು, ಹೊರಾಂಗಣ ಪರಿಸರ ಚಟುವಟಿಕೆಗಳು ನಡೆಯಲಿದೆ.

ಜೆಸಿಐ ಮಂಜುಶ್ರೀ ಬೆಳ್ತಂಗಡಿ ಪೂರ್ವಧ್ಯಕ್ಷ ತುಕಾರಾಮ್ ಸ್ವಾಗತಿಸಿ, ಕಾರ್ಯದರ್ಶಿ ಸುಧೀರ್ ಧನ್ಯವಾದವಿತ್ತರು.

Related posts

ಉಜಿರೆ ಶ್ರೀ. ಧ.ಮಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಣ್ಣಿನ ಗಿಡಗಳ ನಾಟಿ

Suddi Udaya

ಬಳಂಜ : 90 ವರ್ಷದ ವೆಂಕಮ್ಮ ರವರಿಂದ ಮತ ಚಲಾವಣೆ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್ ಹಾಗೂ ಕು. ಕಮಲರವರಿಗೆ ಮುಖ್ಯಮಂತ್ರಿ ಪದಕ ಪುರಸ್ಕಾರ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಭಾರತೀಯ ವೈಜ್ಞಾನಿಕ ಪರಂಪರೆ’ ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya
error: Content is protected !!