25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾರ್ಯಕರ್ತರು

ಬೆಳ್ತಂಗಡಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದೆ. ಬೆಳ್ತಂಗಡಿ ಕ್ಷೇತ್ರಕ್ಕೆ ಹಾಲಿ ಶಾಸಕ ಹರೀಶ್ ಪೂಂಜ ಅವರಿಗೆ ಎರಡನೇ ಬಾರಿಗೆ ಪಕ್ಷ ಅವಕಾಶ ಕಲ್ಪಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿತ್ತು.

ಶಾಸಕ ಹರೀಶ್ ಪೂಂಜ ಅವರ ಸಮರ್ಥ ನಾಯಕತ್ವ ಮತ್ತು ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್‌ ಅವರ ಪಕ್ಷ ಸಂಘಟನೆಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಬಲಿಷ್ಟ್ಯಗೊಳ್ಳುತ್ತಿದೆ.

ಬಿಜೆಪಿ ಪಕ್ಷದ ಸಿದ್ಧಾಂತ ಅಭಿವೃದ್ಧಿ ಆಧಾರಿತ ರಾಜಕಾರಣ ಮತ್ತು ಮೋದಿ ಅವರ ಸುಭದ್ರ ಆಡಳಿತ, ಬೆಳ್ತಂಗಡಿ ಕ್ಷೇತ್ರದಲ್ಲಾದ ಅಭಿವೃದ್ಧಿಗೆ ಮನಸೋತು ಹಾಗೂ ಕಾಂಗ್ರೆಸ್‌ ಪಕ್ಷದ ದೇಶ ವಿರೋಧಿ ನಿಲುವು, ಧರ್ಮವಿರೋಧಿ ಚಿಂತನೆಗಳಿಂದ ಬೇಸರಗೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.

ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಅಭ್ಯರ್ಥಿಯಾಗಿ ಘೋಷಣೆಗೊಂಡ ಬಳಿಕ ಇದುವರೆಗೂ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಅಭ್ಯರ್ಥಿ ಹರೀಶ್ ಪೂಂಜ ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬೋಲೊಟ್ಟು ವಿಠಲ ಶೆಟ್ಟಿ, ರತ್ನಾಕರ ಪೂಜಾರಿ, ಸತೀಶ್ ಶೆಟ್ಟಿ, ಪವನ್ ಶೆಟ್ಟಿ, ಹಂಝ ಮಿತ್ತಬಾಗಿಲು, ವಸಂತ ಬಂಗೇರರ ಬೆಂಬಲಿಗ ಸೇಸಪ್ಪ ನಲಿಕೆ ಅಳದಂಗಡಿ, ರೋಶನ್ ಮೇಲಂತಬೆಟ್ಟು ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಕ್ಷ ಅಭ್ಯರ್ಥಿ ಘೋಷಿಸಿದ ಬಳಿಕ ಹರೀಶ್ ಪೂಂಜ ಅವರು ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದ್ದು ಈ ವೇಳೆ ಅನೇಕ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕಳೆಂಜ ಗ್ರಾಮದ ಬಾಲಕೃಷ್ಣ ಉದ್ಲಾಜೆ, ಎಜೆ ಜೋಸೆಫ್ ಕಾಯದ, ಸಿಬಿನ್ ಎಕೊ, ಜೋಶಿ, ಪುದುವೆಟ್ಟು ಗ್ರಾಮದ ಎ.ಟಿ. ರಾಜು, ಗಂಡಿಬಾಗಿಲು ಗ್ರಾಮದ ಅಜಿತ್ ಪಿ.ಎಮ್, ಬಜಿರೆಯ ಪುಸಾದ್ ಬಜಿರ, ಹರಿ ಮುದ್ರಾಡಿ, ಮೂಡುಕೋಡಿ ಗ್ರಾಮದ ಹನ್ರಿ ಡಿಸೋಜ ಕಾಳಗುರಿ, ಶ್ರೀಧರ ಪೂಜಾರಿ ಕುಕ್ಕರಲೆ, ಅಕ್ಷಯ್ ಪೂಜಾರಿ, ಲಲಿತಾ, ಸವಿತಾ, ವಾರಿಜ, ಸುನೀಲ್, ಸುನಿತಾ, ಕುಸುಮ ಕುದ್ರ, ಅಣು ಶೆಟ್ಟಿ ಬೆದ್ರಡ, ಕೀರ್ತನ್ ಪುತ್ರಿಲಕಜೆ, ಇನಾಸ್ ಡಿಸೋಜ ಕುದ್ರುಪಿ ರಾಜು ನಾಯ್ಕ, ಕೊಪ್ಪದ ಬಾಕಿಮಾರು ಮತ್ತು ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾದ ಕೇಶವ ಪಿಲ್ಮ, ದ.ಕ. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್. ಸಿ. ಸಂಜೀವ ನೆರಿಯ, ನಿಡೆ ಗ್ರಾಮದ ಯೋಗೀಶ್ ಗೌಡ ನೂಜಿಲ, ಕಲ್ಮಂಜ ಗ್ರಾಮದ ಜೋಷ್ ಅಕ್ಷಯನಗರ, ನಾಲ್ಕೂರು ಗ್ರಾಮದ ವಿಠಲ್‌ ಪೂಜಾರಿ, ದಿನೇಶ್ ಪೂಜಾರಿ ಕುದಮ್ಮ, ದುಗ್ರಯ್ಯ, ಪೂಜಾರಿ ಹುಂಬೆ, ನೋಣಯ್ಯ, ಪೂಜಾರಿ ಖಂಡಿಗ, ಜಗದೀಶ್ ಪೂಜಾರಿ ಕುದೊಟ್ಟು, ಹರೀಶ್ ಪೂಜಾರಿ ಕುದೊಟ್ಟು, ಕೊರಗಪ್ಪ ಪೂಜಾರಿ ಹುಂಭಜಲ್, ಯಶೋಧ ಖಂಡಿಗ, ಮಾಧವ ಪೂಜಾರಿ ಖಂಡಿಗ, ಸುಕೇಶ್ ಪೂಜಾರಿ ಹುಂಬೆಲಕ್ಕೆ ಅನಿಸಿತ್ ಪೂಜಾರಿ ಹುಂಬೆ, ನಿಶಾಂತ್ ಪೂಜಾರಿ ಹುಂಬೆಜೆ, ಶ್ರೀಕಾಂತ್‌ ಪೂಜಾರಿ ಖಂಡಿಗ, ಶಿಬಾಜೆ ಗ್ರಾಮದ ಅನಿರುದ್ ಬಿಜು ಅರಂಪಾದ, ಬೆಳಾಲು ಕಾಂಗ್ರೆಸ್ ಬೂತ್‌ ಸಮಿತಿ ಅಧ್ಯಕ್ಷ ಕೇಶವ ಗೌಡ, ಕಾಂಗ್ರೆಸ್‌ ಸಕ್ರಿಯ ಕಾರ್ಯಕರ್ತ ಸಂತೋಷ್ ಮಡಿವಾಳ, ಪುಭಾಕರ ಗೌಡ, ದಿನೇಶ್‌, ಪುವೀಣ್,ಉಪೇಂದ್ರ, ಬೈಪಾಡಿಯ ದಿವಾಕರ ಗೌಡ ಚೆನ್ನಕೇಶವ ನೇಮಣ ಗೌಡ ಸೇರಿದಂತೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ.

Related posts

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಗೃಹಪ್ರವೇಶ: ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಪ್ಪರ ಮೂಹೂರ್ತ

Suddi Udaya

ಖ್ಯಾತ ಕಲಾವಿದ ಗಣೇಶ್ ಗುಂಪಲಾಜೆರವರಿಗೆ ಗಣೇಶೋತ್ಸವದ ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ

Suddi Udaya

ಬಳಂಜ: ಮರಿಯಾಲಡೊಂಜಿ ಐತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಆ. 20 ಆಟಿಕೂಟದ ಗಮ್ಮತ್ ಲೇಸ್, ವಾರ್ಷಿಕ ಮಹಾಸಭೆ

Suddi Udaya

ಪ್ರಕೃತಿ ವಿಸ್ಮಯ: ಪಪ್ಪಾಯಿ ಹಣ್ಣಿನೊಳಗೆ ಮರಿ ಪಪ್ಪಾಯಿ

Suddi Udaya

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದ ವತಿಯಿಂದ 4ನೇ ವರ್ಷದ ದೀಪಾವಳಿ ‘ದೋಸೆ ಹಬ್ಬ’ ಉದ್ಘಾಟನೆ

Suddi Udaya

ಸುಣ್ಣದಕೆರೆ -ಶಕ್ತಿನಗರ ಸಂಪರ್ಕ ರಸ್ತೆ ದುರಸ್ಥಿಗೆ ಕುವೆಟ್ಟು ಗ್ರಾ.ಪಂ. ಸದಸ್ಯರಿಂದ ಆಗ್ರಹ

Suddi Udaya
error: Content is protected !!