24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಎ.30: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 15ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ:

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 15ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ , ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಸಮಾರಂಭವು ಎ.30ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮುಂಭಾಗದಿಂದ ದಿಬ್ಬಣದ ಮೆರವಣಿಗೆ ಹೊರಡುವುದು. ನಂತರ ಬೆಳಿಗ್ಗೆ 10 ಕ್ಕೆ ಅಂಗನವಾಡಿ ಕಾರ್ಯಕರ್ತರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಸಮಾರಂಭ, ಮಧ್ಯಾಹ್ನ 12 ಕ್ಕೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನವು ದ.ಕ ಜಿ.ಪಂ. ಮಾಜಿ ಉಪಾಧ್ಯಕ್ಷ ಯಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ಮುಂಬಯಿ ಉದ್ಯಮಿ ಸುಂದರ್ ರಾಜ್ ಹೆಗ್ಡೆಇವರ ಸಾರಥ್ಯದಲ್ಲಿ ಪ್ರಶಾಂತ್ ಪುಂಜಾಲಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಧ್ಯಾಹ್ನ ಪೆರ್ಡೂರು ಮೇಳದವರಿಂದ ಕುಶ ಲವ ಯಕ್ಷಗಾನ ಪ್ರದರ್ಶನ, ಸಂಜೆ ಪಿಲಿಬೇಟೆ ಕಿರು ಚಿತ್ರ ಪ್ರದರ್ಶನ, ರಾತ್ರಿ ತಾಂಬೂಲ ಕಲಾವಿದೆರ್ ಇವರಿಂದ ಪರಿಮಳ ಕಾಲನಿ ನಾಟಕ ಪ್ರದರ್ಶನ ನಡೆಯಲಿದೆ.

Related posts

ಕಡಿರುದ್ಯಾವರ: ಕೊಪ್ಪದ ಗಂಡಿಯಲ್ಲಿ ಧರೆ ಕುಸಿತ : ಅಪಾರ ನಷ್ಟ

Suddi Udaya

ವಿಪರೀತ ಮಳೆಗೆ ಮಿತ್ತಬಾಗಿಲು ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರ 106ನೇ ಜಯಂತಿ ಆಚರಣೆ

Suddi Udaya

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎಲ್. ಇಡಿ) ಸಂಸ್ಥೆಯಲ್ಲಿ ಕಾಲೇಜು ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Suddi Udaya

ಎ.24- ಮೇ 2 : ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಸಂಭ್ರಮ, ಕೊಡುಗೆಗಳು

Suddi Udaya
error: Content is protected !!