September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಡಿ.6-8 ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ, ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆ

ಉರುವಾಲು: ಭಕ್ತರ ಅಭೀಷ್ಟಗಳನ್ನು ಈಡೇರಿಸುವ, ವಿಘ್ನಗಳನ್ನು ನಿವಾರಿಸುವ ಆನೆ ಮುಖದ ಪ್ರಥಮ ಪೂಜಿಪ ದೇವ ಗಣಪತಿಯನ್ನು ಭಜನೆಯ ಮೂಲಕ ಸುಗಿಸಿಕೊಂಡು ಬರುತ್ತಿರುವ ಕುಪ್ಪೆಟ್ಟಿಯ ಗಣೇಶ ಭಜನಾ ಮಂದಿರದಲ್ಲಿ ಲೋಕಾ ಕಲ್ಯಾಣಕ್ಕಾಗಿ ಅಥರ್ವಶೀರ್ಷ ಗಣಯಾಗ ಹಾಗೂ ಮಹಾಚಂಡಿಕಾಯಾಗ ಡಿ.6-8ರವರೆಗೆ ನಡೆಯಲಿದೆ ಎಂದು ಲೋಕಾರ್ಪಣ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಡಿ.1 ರಂದು ಕುಪ್ಪೆಟ್ಟಿ ಗಣೇಶ ಭಜನಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಡಿ.6-8ವರೆಗೆ ಮೂರುದಿನಗಳಲ್ಲಿ ವಿವಿಧ ಧಾರ್ಮಿಕ ವೈಧಿಕ ವಿಧಿವಿಧಾನಗಳು, ಸಾಂಸ್ಕೃತಿಕ, ಧಾರ್ಮಿಕಾ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಡಿ.7ರಂದು ಗೋಧೋಳಿ ಮುಹೂರ್ತದಲ್ಲಿ ಸಂಜೆ 6ಕ್ಕೆ ನೂತನ ರಾಜಗೋಪುರವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಲಿದ್ದಾರೆ. ಅವರನ್ನು ವೈಭವದ ಮೆರವಣಿಗೆ ಮೂಲಕ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಶ್ರೀ ದುರ್ಗಾ ಗಣಪತಿ ಸಭಾವಭವದ ಲೋಕರ್ಪಾಣೆಯನ್ನು ಮುಂಬೈನ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ನೇರವೆರಿಸಲಿದ್ದಾರೆ. ಡಿ.೬ರಂದುಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕರಾಯ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಪುತ್ತಿಲ, ನಾಳ, ಮಚ್ಚಿನ, ಕಳಿಯ ಗ್ರಾಮ, ಓಡಿಲ್ನಾಳ, ನ್ಯಾಯತರ್ಪು, ಕುವೆಟ್ಟು, ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಧಾರ್ಮಿಕ ಶ್ರದ್ಧಾಕೇಂದ್ರಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ವಿವರಿಸಿದರು.

ಅಥರ್ವಶೀರ್ಷ ಗಣಯಾಗದಲ್ಲಿ ಪಾಲ್ಗೊಳ್ಳುವ ಉರುವಾಲು ಗ್ರಾಮದ ಸೇವಾಕರ್ತರು ಸನಾದಿನಗಳ ಶುದ್ಧ ಪ್ರತಾಚರಣೆಯಲ್ಲಿದ್ದು ಗರಿಕೆಯನ್ನು ಮನೆಯ ದೇವರ ಮಂಟಪದಲ್ಲಿಟ್ಟು ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ ಈ ಮಂತ್ರವನ್ನು ಪಠಣ ಮಾಡಿ ಅನುಷ್ಠಾನ ಮಾಡಿದ ಒಂದು ಮುಷ್ಟಿಗರಿಕೆಯನ್ನು ಡಿ.7ರಂದು ಬೆಳಗ್ಗೆ ಗಂಟೆ 9.೦೦ಕ್ಕೆ ಸರಿಯಾಗಿ ಯಾಗ ಶಾಲೆಗೆ ಕಡ್ಡಾಯವಾಗಿ ತಂದು ಒಪ್ಪಿಸಬೇಕು. ಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳುವ ಸೇವಾಕರ್ತರು 11 ದಿನಗಳ ಶುದ್ಧವ್ರತಾಚರಣೆಯಲ್ಲಿದ್ದು ತೆಂಗಿನಕಾಯಿಯನ್ನು ಮನೆಯ ದೇವರ ಮಂಟಪದಲ್ಲಿಟ್ಟು ಸರ್ವ ಮಂಗಳ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಕೇ, ಶರಣೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ ಈ ಮಂತ್ರವನ್ನು ಪಠಣಮಾಡಿ ತಾವು ಅನುಷ್ಠಾನ ಮಾಡಿದ ಒಂದು ತೆಂಗಿನಕಾಯಿಯನ್ನು ಡಿ.8ರಂದು ಬೆಳಗ್ಗೆ ಗಂಟೆ 9.೦೦ಕ್ಕೆ ಸರಿಯಾಗಿ ಯಾಗ ಶಾಲೆಗೆ ಕಡ್ಡಾಯವಾಗಿ ತಂದು ಒಪ್ಪಿಸುವುದು ಎಂದು ಮಾಹಿತಿ ನೀಡಿದರು.

ಲೋಕಾರ್ಪಣಾ ಸಮಿತಿ ಕಾರ್ಯಾಧ್ಯಕ್ಷ ಕಿರಣ್ ಚಂದ್ರ ಡಿ.ಪುಷ್ಪಗಿರಿ ಮಾತನಾಡಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಗೋಪುರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅವರನ್ನು ಕಲ್ಲೇರಿ ಪೇಟೆಯಿಂದ ಭಜನಾ ಮಂದಿರದ ವರೆಗೆ ವೈಭವದ ಮೆರವಣಿಗೆ ಮೂಲಕ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಶ್ರೀ ಗಣೇಶ ಭಜನಾ ಮಂಡಳಿ ಟ್ರಸ್ಟ್ ಅಧ್ಯಕ್ಷ ರೋಹಿತ ಶೆಟ್ಟಿ ಪಿ.ಕುಪ್ಪೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಕುಪ್ಪೆಟ್ಟಿ, ಭಜನಾ ಮಂದಿರದ ಅಧ್ಯಕ್ಷ ಹರೀಶ್ ನಾಯ್ಕ ಹೊಸ ಮಣ್ಣು, ಸ್ವಾಗತ ಸಮಿತಿ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಅನ್ನದಾನ ಮತ್ತು ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಗೌಡ ಪೊಸಂದೋಡಿ, ವೈದಿಕ ಸಮಿತಿ ಸಂಚಾಲಕ ಕೆ.ಎನ್. ಪ್ರಸನ್ನ ಮುಚ್ಚಿನ್ನಾಯ ನೈದಿಲೆ ಹಲೇಜಿ, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಮಹಿಳಾ ಸಮಿತಿ ಅಧ್ಯಕ್ಷೆ ಸುಮತಿ ಜನಾರ್ದನ ಬೇಂಗಾಯಿ ಹಾಗೂ ಎಸ್ ಕೆ ಡಿ ಆರ್ ಪಿ ವಲಯ ಮೇಲ್ವಿಚಾರಕ ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 2644 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಅಭಿವೃದ್ಧಿ ಕಾಮಗಾರಿಗೆ ತಡೆ ಆರೋಪ: ಇಳಂತಿಲದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯ ಸಭೆ

Suddi Udaya

ಧರ್ಮಸ್ಥಳ: ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಶ್ರೀನಿವಾಸ್ ರಾವ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳಾಲು ಪ್ರೌಢಶಾಲೆ ಪೋಷಕರ ಸಮಾವೇಶ

Suddi Udaya

ಮಚ್ಚಿನ: ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya
error: Content is protected !!