September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ವೇಣೂರು: ಅಕ್ರಮವಾಗಿ ಗಾಂಜಾ ಸಾಗಾಟ,ಆರೋಪಿ ಬಂಧನಮೋಟಾರ್ ಸೈಕಲ್ ಹಾಗೂ ರೂ. 37 ಸಾವಿರದ 500 ಗ್ರಾಂ ಗಾಂಜಾ ವಶ ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ರವರ ನೇತೃತ್ವದಲ್ಲಿ ಕಾರ್ಯಾಚರಣೆ

ವೇಣೂರು:ಮೋಟಾರು ಸೈಕಲ್ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೋಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುವ ಪ್ರಕರಣ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ಅವರ ನೇತೃತ್ವದಲ್ಲಿ ವೇಣೂರು ಠಾಣಾ ವ್ಯಾಪ್ತಿಯ ಬಜಿರೆ ಗ್ರಾಮದ ಹಂದೆವು ಮೂರು ಮಾರ್ಗದ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಶಯಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿತ್ತಿರುವುದು ಕಂಡು ಬಂದಿದೆ.ಆರೋಪಿಯನ್ನು ಬಂಧಿಸಿ ಸುಮಾರು ರೂ 37 ಸಾವಿರದ 500 ಗ್ರಾಂ ಗಾಂಜಾ ಹಾಗೂ ಮೋಟಾರು ಸೈಕಲ್ ನ್ನು ವಶಪಡಿಸಲಾಗಿದ್ದು ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಕಡಬ ತಾಲೂಕಿನ ಸವಣೂರು ಗ್ರಾಮದ ಪ್ರಸಾದ್ ಯಾನೆ ಪಚ್ಚು ಎಂದು ಗುರುತಿಸಲಾಗಿದೆಅರೋಪಿಯು ರೌಡಿ ಶೀಟರ್ ಆಗಿದ್ದು ಅವನ ವಿರುದ್ದ ಪುತ್ತೂರು,ಕಡಬ ಉಪ್ಪಿನಂಗಡಿ ಠಾಣೆಗಳಲ್ಲಿ ಕಳ್ಳತನ ,ಹೊಡೆದಾಟ ಪ್ರಕರಣಗಳು ದಾಖಲಾಗಿವೆ. ಕಾರ್ಯಾರಣೆಯಲ್ಲಿ ಪೋಲಿಸ್ ವೃತ್ತ ನಿರೀಕ್ಷಕರ ಜೊತೆ ಸಿಬ್ಬಂದಿಗಳಾದ ಇಬ್ರಾಹಿಂ,ಅಭಿಜಿತ್ ಕುಮಾರ್,ವಿಜಯ್ ಕುಮಾರ್,ಚೌಡಪ್ಪ, ಚಾಲಕ ಚಿದಾನಂದ ಇದ್ದರು.

Related posts

ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯ ಪ್ರೊ.ಎಸ್.ಪ್ರಭಾಕರ್ ಅವರಿಗೆ ನುಡಿನಮನ

Suddi Udaya

ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಡಾ|| ಹೆಗ್ಗಡೆಯವರು ಪ್ರೇರಣೆ: ಮೋಹನ್ ಕುಮಾರ್

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳದ ಉದ್ಘಾಟನೆ

Suddi Udaya

ಧರ್ಮಸ್ಥಳ: ಮುಂಡ್ರುಪಾಡಿ ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಸದಾಶಿವ ಇರ್ನಾಡಿ ಯವರಿಂದ ನೋಟ್ ಪುಸ್ತಕ ಹಾಗೂ ಪೆನ್ನು -ಪೆನ್ಸಿಲ್ ವಿತರಣೆ

Suddi Udaya
error: Content is protected !!