ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿಯು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮೇ.,1 ರಂದು ನಡೆಯಿತು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜೀನ್ ಸರಕಾರ ಬಂದಾಗ ರಾಜ್ಯದ ಯಾವುದೇ ಭಾಗದಲ್ಲಿ ನೋಡಿದರೂ ಅಭಿವೃದ್ಧಿಯಾಗಿದೆ. ಜನರು ಈ ಭಾರಿಯೂ ಪೂರ್ಣಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ. ಜನರೇ ಕಾಂಗ್ರೆಸ್ ನ ಗ್ಯಾರಂಟಿಯ ಸುಳ್ಳು ಭರವಸೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ಗೆ ಕೊಡುವ ಮತ ಕೂಡ ಅದು ಕಾಂಗ್ರೆಸ್ ಗೆ ಮತ ನೀಡಿದಾಗೆ, ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ರೂ 10 ಸಾವಿರ ಬರುತ್ತದೆ ಇದೂ ಬಿಜೆಪಿಯ ಗ್ಯಾರಂಟಿ. ಭಾರತೀಯ ಜನತಾ ಪಾರ್ಟಿಯಲ್ಲಿ ಜನ ವಿಶ್ವಾಸವಿಟ್ಟಿದ್ದಾರೆ ಎಂದರು.
ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜರವರು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಜನರ ಮೆಚ್ಚುಗೆ ಪಡೆದಿದ್ದಾರೆ. ಇಗೀನ ಸರ್ವೆ ಪ್ರಕಾರ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ. ಹಿಂದುತ್ವ ಹಾಗೂ ದೇಗುಲಗಳ ಪರವಾಗಿ ಇರುವ ಪಾರ್ಟಿ ಅದು ಭಾರತೀಯ ಜನತಾ ಪಾರ್ಟಿ ಮಾತ್ರ ಎಂದರು. ಸಿದ್ದರಾಮಯ್ಯ ಸರಕಾರವಿರುವಾಗ ಬೆಳ್ತಂಗಡಿ ಯಲ್ಲಿ ವಸಂತ ಬಂಗೇರ ಶಾಸಕರಾಗಿದ್ದರು. ನೀವು ದೇವಸ್ಥಾನದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದೀರಿ. ಒಂದು ವೇಳೆ ನೀವು ಅನುದಾನ ತಂದಿದ್ದರೇ ಪಟ್ಡಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ಬಿಜೆಪಿ ಸರಕಾರ ಬೆಳ್ತಂಗಡಿ ತಾಲೂಕಿನಲ್ಲಿ ದೇಗುಲಗಳಿಗೆ ಕೋಟಿ ಕೋಟಿ ಅನುದಾನ ನೀಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕುಶಾಲಪ್ಪ ಗೌಡ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ್ ಗೌಡ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಚುನಾವಣಾ ಸಂಚಾಲಕ ಮಹಾಬಲ ಗೌಡ, ಮಾಧ್ಯಮ ಸಂಚಾಲಕ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.