ಉಜಿರೆ: ಇಲ್ಲಿನ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀ.ಪಿ ರಾಜಗೋಪಾಲ ಯಡಪಡಿತ್ತಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬೆಳಿಗ್ಗೆ ಪಂಚಗವ್ಯ ಪುಣ್ಯಹ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಕಲಶಾಭಿಶೇಕ ಪರ್ವ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಭಂಡಾರ ತೆಗೆದು ದೈವಕ್ಕೆ ಎಣ್ಣೆಬೂಳ್ಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ನಂತರ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ ನಡೆಯಿತು. ಮೇ.೧ರಂದು ಕೊಜಪ್ಪಾಡಿ ಶ್ರೀಮತಿ ಶೋಭಾ ಮತ್ತು ಶ್ರೀ ಸತೀಶ್ ಪೂಜಾರಿ ಹಾಗೂ ಮಕ್ಕಳ ಸೇವೆಯಾಗಿ ಹರಕೆ ನೇಮೋತ್ಸವ ನಡೆಯಿತು.
ಶ್ರೀ ವ್ಯಾಘ್ರಚಾಮುಂಡಿ ಸೇವಾಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟ್ ಸ್ಥಾಪಕ ಎಂ.ಜಿ ಶೆಟ್ಟಿ. ಅಧ್ಯಕ್ಷ ಸೀತಾರಾಮ ಶೆಟ್ಟಿ, ಜೊತೆ ಕಾರ್ಯದರ್ಶಿ ಚಿತ್ರೇಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಆಚಾರ್, ಉಪಾಧ್ಯಕ್ಷ ಹರೀಶ್ ಕಾವ, ಕಾರ್ಯದರ್ಶಿ ಪರಮೇಶ್ವರ, ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಮಧುರ,ವಿದ್ಯಾ ಕುಮಾರ್, ವಿನಯಚಂದ್ರ, ಸತೀಶ್ ಗೌಡ, ಶ್ರೀಮತಿ ವಿಶಾಲಾಕ್ಷಿ ರಾಮಣ್ಣ ನಾಯ್ಕ, ಅಣ್ಣಿ ಗೌಡ ಖಾಯಂ ಆಹ್ವಾನಿತರಾದ ಪದ್ಮಣ್ಣ ಗೌಡ, ಶ್ರೀಮತಿ ಪುಷ್ಪಾವತಿ ಶ್ರೀನಿವಾಸ ಗೌಡ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.