ಪುಂಜಾಲಕಟ್ಟೆ: ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥವಾಗಿ ಸುಮಾರು 86 ವರ್ಷಗಳ ಸುಧೀರ್ಘ ಅನುಭವದೊಂದಿಗೆ ಚಿನ್ನಾಭರಣ ಪ್ರೀಯರ ನೆಚ್ಚಿನ ಮಳಿಗೆಯಾದ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಮೇ.3 ರಂದು ಶುಭಾರಂಭಗೊಳ್ಳಲಿದೆ.
ಕಳೆದ 8 ದಶಕಗಳ ಹಿಂದೆ ಬಿ. ಪುಂಡಲೀಕ ಬಾಳಿಗ ರವರು ಚಿನ್ನಾಭರಣ ಮಳಿಗೆಯನ್ನು ಸ್ಥಾಪಿಸಿ ಜಿಲ್ಲೆಯ ಪ್ರಸಿದ್ದ ಸಂಸ್ಥೆಗಳಲ್ಲಿ ಪುಂಜಾಲಕಟ್ಟೆಯ ಪುಂಡಲೀಕ ಬಾಳಿಗ ಕೂಡ ಒಂದಾಗಿದೆ.
ಸ್ವರ್ಣೋದ್ಯಮದೊಂದಿಗೆ ಸಮಾಜಸೇವೆಯನ್ನು ಉಸಿರಾಗಿಸಿಕೊಂಡು ಜಿಲ್ಲೆಯಾದ್ಯಂತ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬರುತ್ತಿರುವ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ವಿಶೇಷವಾಗಿ ಸಂಸ್ಥೆಯು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ, ಉದ್ಯಮದಲ್ಲಿ ಬಲವಾದ ಪರಂಪರೆಯನ್ನು ಸೃಷ್ಟಿಸಿದೆ.
ವಿಶಾಲವಾದ ಸುಸಜ್ಜಿತ ಕಟ್ಟಡದಲ್ಲಿ ಬಂಗಾರದ ವಿನ್ಯಾಸ ಹೊಸತನವನ್ನು ಅನುಭವಿಸಿ, ಆಕರ್ಷಕ ಆಭರಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ ಎಂದು ಬಿ. ಪುರುಷೋತ್ತಮ ಬಾಳಿಗಾ, ಬಿ. ರವೀಂದ್ರ ಬಾಳಿಗಾ, ಬಿ. ಪ್ರಶಾಂತ ಬಾಳಿಗಾ ತಿಳಿಸಿದರು.

previous post
next post