ಧರ್ಮಸ್ಥಳ : ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ರ ಗೋಧೂಳಿ ಲಗ್ನ ಸುಮೂರ್ಹದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ
ಸಭಾಂಗಣದಲ್ಲಿ ವೇದ ಘೋಷ ಮಂತ್ರ ಪಠಣದೊಂದಿಗೆ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ನಿನ್ನೆ ಸಂಜೆ ಡಾ. ಹೆಗ್ಗಡೆಯವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ವಿತರಿಸಿದರು.
ಇಂದು ಸಂಜೆ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು. ಅಲ್ಲಿ ಧಮಾ೯ಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ , ಕನ್ನಡ ಚಲನ ಚಿತ್ರ ನಟ ದರ್ಶನ್, ಹೇಮಾವತಿ
ಹೆಗ್ಗಡೆ, ಎಂ.ಎಲ್ .ಸಿ ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ ಮತ್ತು ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿ, ಆಯಾ ಜಾತಿ-ಸಂಪ್ರದಾಯ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧು-ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಸುರೇಂದ್ರ ಕುಮಾರ್, ಸುಪ್ರೀಯ ಹರ್ಷೇಂದ್ರ ಕುಮಾರ್, ಉಪಸ್ಥಿತರಿದ್ದರು.
ಕು. ಅನಿಕ ತಂಡ ಇವರ ಪ್ರಾರ್ಥನೆ ಬಳಿಕ ಡಿ.ಹಷೇಂದ್ರ ಕುಮಾರ್ ಸ್ವಾಗತಿಸಿದರು. ದಿವ್ಯಾ ಕುಮಾರಿ ಮತ್ತು ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.
12,777ನೇ ವಿಶೇಷ ಜೋಡಿ : ಸಾಮೂಹಿಕ ವಿವಾಹದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯಲ್ಲಿ ಉದ್ಯೋಗದಲ್ಲಿ ಇರುವ ಪ್ರಸಾದ್ ಮತ್ತು ಆಶ್ವಿನಿ ಈ ವಷ೯ ಮದುವೆಯಾದ 12,777ನೇ ಜೋಡಿಯಾಗಿ ವಿಶೇಷವಾಗಿ ಗಮನಸೆಳೆದರು. ಈ ವಧು-ವರರಿಗೆ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿತ್ತು.
ಮದುವೆಯಾದ 201 ಜೋಡಿಗಳಲ್ಲಿ 52 ಅಂತರ್ಜಾತಿ ವಿವಾಹಗಳು ನಡೆಯಿತು. 52 ಪ.ಜಾತಿ, ಮರಾಠಿ ನಾಯ್ಕ 5, ವೀರ ಶೈವರು 9, ಮರಾಠಿ ಶಿವಾಜಿ 5, ಒಕ್ಕಲಿಗ ಗೌಡ 4, ಕುಂಬಾರ 1, ವಿಶ್ವಕರ್ಮ 5, ಉಪ್ಪಾರ 3, ವಾಲ್ಮೀಕಿ ಬೇಡರು 2, ದೇವಾಂಗ 2, ಈಡೀಗ ಪೂಜಾರಿ 2, ಮೋಗೇರ 2, ಖಾವಿ೯2, ನಾಯಕರು 2, ಪೂಜಾರಿ 4, ಪರಿಶಿಷ್ಟ ವರ್ಗ 11, ದಾಸರು 3, ರೆಡ್ಡಿ 2, ಅಂಬಿಗ, ಹಾಲಕ್ಕಿ, ಕುಂಬ್ರಿ ಮರಾಠಿ, ಬಲಿಜ, ಕುಂಚಿಟಿಗ, ದೇವಾಗ, ಜೋಗಿ, ಬಂಟರು, ಬೆಸ್ತರು ತಲಾ 1 ಜೊತೆ ವಿವಿಧ ಜಾತಿಯವರು ಮದುವೆಯಾಗಿದ್ದಾರೆ.
ವಿವಿಧ ಜಿಲ್ಲೆಯವರು ಬೆಳ್ತಂಗಡಿ ತಾಲೂಕಿನಿಂದ 5, ಪುತ್ತೂರು 6, ಮಂಗಳೂರು 5 ಉಡುಪಿ ಜಿಲ್ಲೆಯಿಂದ 24, ಚಿಕ್ಕಮಗಳೂರು 14, ಶಿವಮೊಗ್ಗ 16, ಹಾಸನ 11, ಬೆಂಗಳೂರು 9, ಮೈಸೂರು 13, ಹಾವೇರಿ 6, ದಾವಣಗೆರೆ 9, ಕೊಡಗು 7, ಧಾರವಾಡ 7, ಉತ್ತರಕನ್ನಡ 17, ಚಿತ್ರದುರ್ಗ 3, ಮಂಡ್ಯ 9, ರಾಮನಗರ 5, ಚಾಮರಾಜನಗರ 7, ಬಳ್ಳಾರಿ 3, ತುಮಕೂರು 10, ಬೆಳಗಾಂ 3, ಕೋಲಾರ1, ಹೊರ ರಾಜ್ಯಗಳಾದ, ಕೇರಳ 3, ಆಂಧ್ರಪ್ರದೇಶದ 1 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾಗಿದ್ದಾರೆ. ವಿವಿಧ ವೃತಿಯವರು ವಿವಾಹವಾದರಲ್ಲಿ 57 ಮಂದಿ ಕೂಲಿ, 13 ಮಂದಿ ಬೇಸಾಯ, 13 ಮಂದಿ ವ್ಯಾಪಾರ, 35 ಮಂದಿ ಚಾಲಕರು, 75 ಮಂದಿ ಖಾಸಗಿ ಉದ್ಯೋಗ, 1 ಸರಕಾರಿ ಉದ್ಯೋಗ, 5 ಮರದ ಕೆಲಸ, 2 ಮೀನುಗಾರಿಕೆ ಸೇರಿದಂತೆ ವಿವಿಧ ವೃತ್ತಿಯವರು ವಿವಾಹ ಬಂಧನಕ್ಕೆ ಒಳಗಾದರು.