23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

ಪುಂಜಾಲಕಟ್ಟೆ: ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥವಾಗಿ ಸುಮಾರು 86 ವರ್ಷಗಳ ಸುಧೀರ್ಘ ಅನುಭವದೊಂದಿಗೆ ಚಿನ್ನಾಭರಣ ಪ್ರೀಯರ ನೆಚ್ಚಿನ ಮಳಿಗೆಯಾದ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಮೇ.3 ರಂದು ಶುಭಾರಂಭಗೊಂಡಿತು.

ಕಳೆದ 8 ದಶಕಗಳ ಹಿಂದೆ ಬಿ. ಪುಂಡಲೀಕ ಬಾಳಿಗ ರವರು ಚಿನ್ನಾಭರಣ ಮಳಿಗೆಯನ್ನು ಸ್ಥಾಪಿಸಿ ಜಿಲ್ಲೆಯ ಪ್ರಸಿದ್ದ ಸಂಸ್ಥೆಗಳಲ್ಲಿ ಪುಂಜಾಲಕಟ್ಟೆಯ ಪುಂಡಲೀಕ ಬಾಳಿಗ ಕೂಡ ಒಂದಾಗಿದೆ.


ಸ್ವರ್ಣೋದ್ಯಮದೊಂದಿಗೆ ಸಮಾಜಸೇವೆಯನ್ನು ಉಸಿರಾಗಿಸಿಕೊಂಡು ಜಿಲ್ಲೆಯಾದ್ಯಂತ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬರುತ್ತಿರುವ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ವಿಶೇಷವಾಗಿ ಸಂಸ್ಥೆಯು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ, ಉದ್ಯಮದಲ್ಲಿ ಬಲವಾದ ಪರಂಪರೆಯನ್ನು ಸೃಷ್ಟಿಸಿದೆ.


ವಿಶಾಲವಾದ ಸುಸಜ್ಜಿತ ಕಟ್ಟಡದಲ್ಲಿ ಬಂಗಾರದ ವಿನ್ಯಾಸ ಹೊಸತನವನ್ನು ಅನುಭವಿಸಿ, ಆಕರ್ಷಕ ಆಭರಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಮಳಿಗೆಯನ್ನು ಬಿ. ಪುರುಷೋತ್ತಮ ಬಾಳಿಗಾ- ಚಂದ್ರಕಲಾ ಬಾಳಿಗಾ, ಬಿ. ರವೀಂದ್ರ ಬಾಳಿಗಾ- ರೇಖಾ ಬಾಳಿಗಾ,ದಿನೇಶ್ ಪೈ-ಪ್ರಭಾ ಡಿ ಪೈ, ಬಿ. ಪ್ರಶಾಂತ ಬಾಳಿಗಾ-ದಿವ್ಯಾ ಬಾಳಿಗಾ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು

ಶುಭಾರಂಭದ ಪ್ರಯುಕ್ತ ಮಳಿಗೆಗೆ ಗ್ರಾಹಕರು ಆಗಮಿಸಿ ಶುಭಹಾರೈಸುತ್ತಿದ್ದಾರೆ.

Related posts

ಉಪ್ಪಿನಂಗಡಿಯಲ್ಲಿ ಕಾರ್ಮಿಕ ಕೊಲೆ ಪ್ರಕರಣ : ಆರೋಪಿ ಕಲ್ಮಂಜ ನಿವಾಸಿ ಬಾಬು ಬಂಧನ

Suddi Udaya

ನೈನಾಡು :ಪಿಂಟೊ ಬೇಕರಿ ಸಂಸ್ಥೆಯ ಮಾಲಕ ಸಿಲ್ವೆಸ್ಟರ್ ಪಿಂಟೊ ನಿಧನ

Suddi Udaya

ಶಿರ್ಲಾಲು ಪೇಟೆಯಲ್ಲಿ ಕಾಣಿಸಿಕೊಂಡ ಚಿರತೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಮಾಲಾಡಿ: ರೋನಾಲ್ಡ್ ಫೆರ್ನಾಂಡಿಸ್ ನಿಧನ

Suddi Udaya

ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತ

Suddi Udaya
error: Content is protected !!