24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿ

ಕೊಯ್ಯೂರು: ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ಸೇರ್ಪಡೆ

ಕೊಯ್ಯೂರು ಗ್ರಾಮದ ಆದೂರ್ ಪೇರಾಲ್ ನಲ್ಲಿ ನಡೆದ ಬೆಳ್ತಂಗಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಲವಾರು ಮಂದಿ ಬಿ ಜೆ ಪಿ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿದರು.

ಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ನಾರಾಯಣ ನೀರಾಕಜೆ, ಬಿ ಜೆ ಪಿ ಯ ಸಕ್ರಿಯ ಕಾರ್ಯಕರ್ತರಾದ ಮೋನಪ್ಪ ಸಾಲಿಯಾನ್ ಬಜಿಲ, ರವೀಂದ್ರ ಪೂಜಾರಿ ಬಜಿಲ, ಲೋಹಿತ್ ಉಮಿಯ, ಸುರೇಶ ಉಮಿಯ, ಯೋಗೀಶ್ ಪದ್ಮುಂಜ, ದೇಜಪ್ಪ ನಿರಾರಿ, ರವೀಂದ್ರ ಆಚಾರ್ಯ ಕೊಯ್ಯುರು ಮುಂತಾದವರು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಭ್ಯರ್ಥಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ರಾಜಶೇಖರ ಅಜ್ರಿ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೇಸ್ ಅಧ್ಯಕ್ಷ ಸಾಹುಲ್ ಹಮೀದ್, ಪ್ರವೀಣ್ ವಿ ಜಿ ಮುಂತಾದವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Suddi Udaya

ವೇಣೂರು ಐಟಿಐ : ಟೊಯೋಟೊ ನೇಮಕಾತಿ ಶಿಬಿರ

Suddi Udaya

ಇಂದು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ: ಬೆಳ್ತಂಗಡಿ ತಾಲೂಕಿನ ಮೂರು ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನ

Suddi Udaya

ಚಾರ್ಮಾಡಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ದನದ ತ್ಯಾಜ್ಯ ಎಸೆದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ಸಮಾವೇಶ: ಬೃಹತ್ ಸಾರ್ವಜನಿಕ ಸಭೆ – ಜಾಥಾ ಮತ್ತು ಹಕ್ಕೊತ್ತಾಯ ಮಂಡನೆ

Suddi Udaya

ಬೆಳ್ತಂಗಡಿ ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಮಾನ್ವಿ ಲೈಟ್ ಹೌಸ್ ಶುಭಾರಂಭ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ