26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಿಕ್ಷಣ ಸಂಸ್ಥೆ

ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯಸ್ಸು ಕಡ್ಡಾಯ ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಡ್ಡಾಯವಾಗಿ 6 ವರ್ಷ ವಯಸ್ಸು ತುಂಬಿರಬೇಕೆಂಬ ನಿಯಮ 2025-26ನೇ ಸಾಲಿನಿಂದ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಪ್ರಸಕ್ತ 2023-24ನೇ ಸಾಲಿನಿಂದ ಎಲ್‌ಕೆಜಿಗೆ ಮಕ್ಕಳನ್ನು ದಾಖಲಿಸಲು ಬರುವ ಜೂನ್ 1 ಕ್ಕೆ ಕಡ್ಡಾಯವಾಗಿ 4 ವರ್ಷ ತುಂಬಿರಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಸಾಲಿನಿಂದ ಎಲ್‌ಕೆಜಿಗೆ ದಾಖಲಾಗುವ ಮಕ್ಕಳು 2025-26ಕ್ಕೆ 1ನೇ ತರಗತಿಗೆ ದಾಖಲಾಗಲಿದ್ದಾರೆ. ಹಾಗಾಗಿ ಆ ವೇಳೆಗೆ ಮಕ್ಕಳ ದಾಖಲಾತಿಗೆ ವಯಸ್ಸಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಇದೀಗ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರವೇಶಕ್ಕೂ ಇಲಾಖೆ ವಯೋಮಿತಿ ನಿಗದಿಪಡಿಸಿದೆ.

‘ಶಿಕ್ಷಣ ಹಕ್ಕು ಕಾಯ್ದೆ-2009’ ಮತ್ತು ‘ಕಡ್ಡಾಯ ಶಿಕ್ಷಣ ನಿಯಮ’ದಂತೆ ಈಗಾಗಲೇ ಆದೇಶಿಸಿರುವಂತೆ 2025-26ನೇ ಸಾಲಿನಿಂದ 1ನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಬೇಕೆಂಬ ನಿಯಮದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇರುವುದಿಲ್ಲ. ಹಾಗಾಗಿ ಈ ಸಾಲಿನಿಂದ ಎಲ್ ಕೆಜಿಗೆ ಮಕ್ಕಳನ್ನು ದಾಖಲಿಸುವ ಪೋಷಕರು 4 ವರ್ಷ ವಯಸ್ಸು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಎಲ್‌ಕೆಜಿಗೆ ದಾಖಲಿಸಬೇಕು. ಆಗ ಮಾತ್ರ ಅವರು 1ನೇ ತರಗತಿಗೆ ಪ್ರವೇಶ ಪಡೆಯುವಾಗ ಅವರಿಗೆ 6 ವರ್ಷ ಪೂರ್ಣಗೊಳ್ಳಲಿದೆ. ಇಲ್ಲದಿದ್ದರೆ ಎಲ್‌ಜಿ, ಯುಕೆಜಿ ಮುಗಿಸಿದ್ದರೂ ವಯಸ್ಸು 6 ವರ್ಷ ಪೂರ್ಣಗೊಳ್ಳದ ಕಾರಣಕ್ಕೆ ಒಂದನೇ ತರಗತಿಗೆ ಪ್ರವೇಶ ದೊರೆಯದೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಆಚರಣೆ

Suddi Udaya

ಲಾಯಿಲ : ಡಿಸೇಲ್ ಇಲ್ಲದೆ ಕೈಕೊಟ್ಟ ಕೆಎಸ್ಸಾರ್ಟಿಸಿ ಬಸ್: ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಕ್ಕಿಂಜೆ ಶಾಲಾ ಬಳಿಯ ಮರದಲ್ಲಿದ್ದ ಹೆಜ್ಜೇನು ಓಡಿಸುವ ಕಾರ್ಯಾಚರಣೆ ಪೂರ್ಣ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಉಜಿರೆಯ ಅನುಗ್ರಹ ಆಂ.ಮಾ. ಶಿಕ್ಷಣ ಸಂಸ್ಥೆಗೆ ಹಲವು ಪ್ರಶಸ್ತಿಗಳು

Suddi Udaya
error: Content is protected !!