22.1 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಧರೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ಸು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತ್ಯು

ನಾವೂರು: ಇಲ್ಲಿಯ ನಾವೂರು ಗ್ರಾಮದ ಪಡಂಬಿಲ ಎಂಬಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಗುದ್ದಿದ ಪರಿಣಾಮ ಓರ್ವ ಮಹಿಳೆ ಆಸ್ಪತ್ರೆಗೆ ತರುವಲ್ಲಿ ದಾರಿ ಮಧ್ಯೆ ಮೃತಪಟ್ಟ ಘಟನೆ ಇಂದು ಸಂಜೆ ಸಂಭವಿಸಿದೆ.

ಇಂದಬೆಟ್ಟು ಗ್ರಾಮದ ಬಂಗಾಡಿ ಲಿಂಗತ್ತ್ಯಾ ರು ನಿವಾಸಿ ಸುಂದರಿ (50ವ)ಮೃತಪಟ್ಟರು ಎಂದು ಹೇಳಲಾಗುತ್ತಿದೆ.

ಬೆಳ್ತಂಗಡಿ- ಕಿಲ್ಲೂರು ಲೈನ್‌ನಲ್ಲಿ ಓಡಾಟ ನಡೆಸುತ್ತಿರುವ ಖಾಸಗಿ ಬಸ್ ಎಂಡ್‌ಕಟ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಧರೆಗೆ ಗುದ್ದಿ ಈ ದುರ್ಘಟನೆ ನಡೆದಿದೆ. ಸುಂದರಿ ಅವರು ಬಂಗಾಡಿ ಲಿಂಗತ್ತ್ಯಾ ರು ಮನೆಯಿಂದ ಲಾಯಿಲ ಪುತ್ರಬೈಲಿನ ತನ್ನ ಮಗಳ ಮನೆಗೆ ಬಸ್ಸಿನಲ್ಲಿ ಬರುತ್ತಿರು ಸಂದರ್ಭ ಈ ಘಟನೆ ನಡೆದಿದೆ

ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

Related posts

ಬಂದಾರು: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಜಿಲ್ಲೆಯಲ್ಲಿ ವ್ಯಾಪಕಮಳೆಯಾಗುತ್ತಿರುವ ಹಿನ್ನೆಲೆ:ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ನಾಳೆ ರಜೆ

Suddi Udaya

ಚೈನೈ: ಶಾಸ್ತ್ರೀಯ ಸಂಗೀತ ಆಕಾಶ್ ಕೃಷ್ಣ ದ್ವಿತೀಯ

Suddi Udaya

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

Suddi Udaya

ಶರತ್ ಮಡಿವಾಳ ಸ್ಮಾರಕಕ್ಕೆ ಪುಷ್ಪ ನಮನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸದಸ್ಯರ ಭೇಟಿ

Suddi Udaya
error: Content is protected !!