September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

ನೆರಿಯ ಗ್ರಾಮದ ಸುಂದರ ಮಲೆಕುಡಿಯರ ಕೈಗೆ ಕಳೆ ಕೊಚ್ಚುವ ಯಂತ್ರದಿಂದ ಅಮಾನುಷವಾಗಿ ಕಡಿದು ಬೆರಳನ್ನು ತುಂಡರಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ದಶಕದ ಬಳಿಕ ಸಮಾಧಾನಕರ ತೀರ್ಪನ್ನು ನೀಡಿದೆ.

ಆರೋಪಿಯ ಬಂಧನಕ್ಕೆ ಆಗ್ರಹಿಸಿ ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷರುಗಳಾದ ಸಂಜೀವ ಕುಲ್ಲಾಜೆ, ಎಲ್ಯಣ್ಣ ಮಲೆಕುಡಿಯ ಅಂದಿನ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಲಂಗಾರು , ವಸಂತಿ ಕುತ್ಲೂರು, ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀಧರ್ ಗೌಡ ಈದು ಮೊದಲಾದವರ ನೇತೃತ್ವದಲ್ಲಿ ಕೇಮಾರು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೃಹತ್ ಹೋರಾಟವನ್ನು ಮಾಡಲಾಗಿತ್ತು.

ಹೋರಾಟದಲ್ಲಿ ಭಾಗಿಯಾದ ಎಲ್ಲಾ ಸಮುದಾಯ ಬಾಂಧವರಿಗೆ , ತನಿಖಾಧಿಕಾರಿಗಳು ಮತ್ತು ಅಭಿಯೋಜಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ. ದೌರ್ಜನ್ಯಕ್ಕೊಳಗಾದ ಸುಂದರ ಮಲೆಕುಡಿಯರಿಗೆ ಪರಿಹಾರ ಧನವನ್ನು ಶೀಘ್ರದಲ್ಲಿ ನೀಡುವಂತೆ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ರವರು ಆಗ್ರಹಿಸಿದ್ದಾರೆ.

Related posts

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya

ಬೆಳಾಲು: ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ; ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ಅನುಖ -2025 ರ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ ವರ್ಧನ ಕಾರ್ಯಾಗಾರ

Suddi Udaya

ಮಳೆಗೆ ಕೃತಕ ಕೆರೆಯಂತಾದ ಕಕ್ಕಿಂಜೆ–ನೆರಿಯ ರಸ್ತೆ

Suddi Udaya

ತೀರಾ ಹದಗೆಟ್ಟ ಮಚ್ಚಿನ ಪುರುಷರ ಮಜಲು ಕಲಾಯಿ ರಸ್ತೆ : ಶಾಲಾ ಮಕ್ಕಳ ಪರದಾಟ; ದುರಸ್ತಿಗೆ ಸ್ಥಳೀಯರ ಒತ್ತಾಯ

Suddi Udaya
error: Content is protected !!