April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ನಿಡ್ಲೆ ಗ್ರಾಮದ ಕಾಂಗ್ರೆಸ್ ಬೆಂಬಲಿಗರು ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ನಿಡ್ಲೆ : ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷಕ್ಕೆ ತಾಲೂಕಿನಲ್ಲಿ ಬಿಗ್ ಶಾಕ್ ಎದುರಾಗಿದೆ. ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಫೀಲ್ಡ್ ಮಾಡುತ್ತಿದ್ದ ನಿಡ್ಲೆ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರಾದ ರವಿ, ಪ್ರಸಾದ್, ಶಿವಪ್ಪ, ರೋಷನ್, ಪ್ರಶಾಂತ್, ನವೀನ, ರಮೇಶ್, ವಿನೋದ, ಹರೀಶ್ ಮತ್ತು ಮುಂಡಾಜೆಯ ರವಿ ಎಂ.ಎಲ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಪಕ್ಷದ ಹಿರಿಯ ನಾಯಕರಾದ ಸುಬ್ರಮಣ್ಯ ಅಗರ್ತ, ನಲಿಕೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆ, ಸಂಘದ ಕಾರ್ಯದರ್ಶಿ ಅನಂತ ಮುಂಡಾಜೆ, ನಿಡ್ಲೆ ಬೂತ್‌ ಅಧ್ಯಕ್ಷ ನಿತಿನ್ ಗೌಡ, ಕಾರ್ಯದರ್ಶಿ ಸಂತೋಷ್ ಮತ್ತು ಇತರೆ ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಪದ್ಮುಂಜ: ರವಿಚಂದ್ರ ಶೆಟ್ಟಿರವರ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ

Suddi Udaya

ಯುವ ಉದ್ಯಮಿ ಕಿರಣ್ ಕುಮಾರ್ ಮಂಜಿಲರವರಿಂದ ಮಾನವೀಯ ಕಾರ್ಯ: ಆರಂಬೋಡಿ ಗ್ರಾಮದ ಬಡ ಕುಟುಂಬಕ್ಕೆ ಸುಮಾರು ರೂ 70 ಸಾವಿರದಲ್ಲಿ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಶಿರ್ಲಾಲು ಗರಡಿ – ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

Suddi Udaya

ಇಂದಬೆಟ್ಟು: ಪಿಲಿಕಜೆ ನಿವಾಸಿ ಓಬಯ್ಯ ಗೌಡ ನಿಧನ

Suddi Udaya

ಕಕ್ಕಿಂಜೆ ಸ.ಪ್ರೌ. ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ದಿನಾಚರಣೆ

Suddi Udaya

ಮಂಗಳೂರುನಲ್ಲಿ ಪ್ರಜಾಧ್ವನಿ ಯಾತ್ರೆ : ಬೆಳ್ತಂಗಡಿ ಯಲ್ಲಿ ಪೂರ್ವ ಸಮಾಲೋಚನಾ ಸಭೆ

Suddi Udaya
error: Content is protected !!