ನೆರಿಯ :ಗಂಡಿಬಾಗಿಲಿನ ನೆರಿಯ ಕ್ಕಾಡ್ ಪರಿಸರದಲ್ಲಿ ಕಳೆದ ವರ್ಷದ ಅತಿವೃಷ್ಟಿ ಯಲ್ಲಿ ಹಾನಿಗೀಡಾದ ಮನೆಯನ್ನು ಗಂಡಿಬಾಗಿಲಿನ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಕೆ ಎಸ್ ಎಂ ಸಿ ಎ ನೇತೃತ್ವದಲ್ಲಿ ಮರು ನಿರ್ಮಿಸಿ ಮನೆಯವರಿಗೆ ಹಸ್ತಾoತರಿಸಲಾಯಿತು.
ಮನೆಯ ಆಶೀರ್ವಾದವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತಿ ವಂದನಿಯ ಲಾರೆನ್ಸ್ ಮುಕ್ಕುಯಿ ನಿರ್ವಹಿಸಿದರು. ನಲವತ್ತ ಐದು ದಿನಗಳಲ್ಲಿ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆ ನಿರ್ಮಿಸಿರುವುದು ಕೆ ಎಸ್ ಎಂ ಸಿ ಎ ಕಾರ್ಯಕರ್ತರ ಕಾರ್ಯ ವೈಖರಿಗೆ ಹಿಡಿದ ಕೈ ಗನ್ನಡಿ ಎಂದು ಧರ್ಮಾಧ್ಯಕ್ಷರು ಶ್ಲಾಘಿಸಿದರು.
ಸಹಕರಿಸಿದ ಎಲ್ಲರನ್ನು ವಂದನಿಯ ಫಾ /ಶಾಜಿ ಮಾತ್ಯು ಧನ್ಯವಾದ ಸಮರ್ಪಿಸಿದರು. ಆರ್ಥಿಕ ಸಹಾಯವನ್ನು ಮನೋಜ್ ಮಾದವತ್, ಗಂಡಿಬಾಗಿಲು, ಸೇಬಾಸ್ಟಿನ್ ಚಾಕೋ ಕತ್ತಾರ್, ಶೋಭಾ ಜೋಬ್ ಯು ಎಸ್ ಎ, ಕಿರಣ್ ಮಾಳ ಚೌಕಿ, ಡಾ /ಅಂಟೋನಿ ತೋಟ್ಟ ಪ್ಪಳ್ಳಿ ನಾವೂರು. ವಿನೋದ್ ನೀಲಿಯರ, ವಿನ್ ಸೆಂಟ್ ಡಿ ಪೌಲ್ ಗಂಡಿ ಬಾಗಿಲು, ಶಿಜು ಸಿ ವಿ, ಸಿ ಎಂ ಎಲ್ ಗಂಡಿಬಾಗಿಲು ಕೆ ಎಸ್ ಎಂ ಸಿ ಎ ಮಹಿಳಾ ಘಟಕ ಗಂಡಿಬಾಗಿಲು, ಬಿಜು, ಸಾಜು ದೇವಗಿರಿ ಜಸ್ಥಿನ್, ಆದರ್ಶ್,ಸೆಂಟ್, ಬೇಬಿ, ಸುಜನ್,ತಂಗಚನ್, , ಜೋಯ್ ಕೆ ವಿ ತೋಮಸ್ ವಿ ಡಿ, ಟೊಮಿ ನೀಲಿಯರ, ರೆಜಿ ತೋಟ್ಟಥಾಡಿ, ಅರುಣ್ ಸೋಮನ್, ಬಿಜು ಮಾಧವತ್,ಫ್ರಾನ್ಸಿಸ್ ಪಿ ಪಿ ,ನಿತಿನ್ ಮಾದವತ್, ಜೇಮ್ಸ್ ರೂಡ್ಸೆಟ್ ಪ್ರಜ್ವಲ್, ಬೇಬಿ ವಿ ಟಿ,ಜೋಯ್ ಕಾಟ್ಟುoಕಲ್, ಪ್ರಕಾಶ್, ಬೇಬಿ ಆಯಾಮ್ ಕುಡಿ ಹಾಗೂ ಇತರರು ಸಹಾಯ ವನ್ನು ನೀಡಿದರು. ಟ್ರಸ್ಟಿ ಗಳಾದ ಸೇಬಾಸ್ಟಿನ್ ಎಂ ಜೆ ಮಾತ್ಯು ಪಿ ಎಂ ಬೇಬಿ ಸಿ ಎ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ ಎಲ್ಲ ಗಣ್ಯರನ್ನು ಹಿತೈಷಿ ಗಳನ್ನು ಸ್ವಾಗತಿಸಿದರು. ಶಿಜು ಸಿ ವಿ ಕಾರ್ಯಕ್ರಮ ನಿರೂಪಿಸಿದರು.