ಕೊಕ್ಕಡ: ನಿನ್ನೆ ಸಂಜೆ ಬೀಸಿದ ಭೀಕರ ಬಿರುಗಾಳಿ ಮಳೆಗೆ ಕೊಕ್ಕಡ ಗ್ರಾಮದ ತೆಂಕುಬೈಲು ಪಿಲಿ ಚಾಮುಂಡಿ ದೇವಸ್ಥಾನದ ಆವರಣದಲ್ಲಿ ಹಳೇ ಕಾಲದ ನೆಲ್ಲಿಕಾಯಿಯ ಮರದ ಕೊಂಬೆ ದೈವಸ್ಥಾನದ ಗುಡಿಯ ಮೇಲೆ ವಾಲಿ ಕೊಂಡು ಇದ್ದು, ನಿನ್ನೆ ನಡೆದ ಗಾಳಿಯ ರಭಸಕ್ಕೆ ಎರಡು ದೈವಗಳ ಗುಡಿಗಳ ಮಧ್ಯೆ ಬಿದ್ದಿದೆ. ಗುಡಿಯ ಮೇಲೆ ವಾಲಿಕೊಂಡಿದ್ದ ಈ ಮರ ಗಾಳಿಗೆ ತಿರುಗಿ ಎರಡು ಗುಡಿಗಳ ಮಧ್ಯೆ ಬಿದ್ದಿರುವುದು ದೈವದ ಕಾನಿ೯ಕ ವನ್ನು ತೋರಿಸಿದೆ ಎಂದು ಭಕ್ತರು ನಂಬಿದ್ದಾರೆ. ಮರದ ಕೊಂಬೆ ಗುಡಿಯ ಮೇಲೆ ಬಿಳುತ್ತಿದ್ದರೆ, ಗುಡಿ ಗೆ ಹೆಚ್ಚಿನ ಹಾನಿಯಾಗುತ್ತಿತ್ತು.
ಕೆಲವು ವರ್ಷಗಳ ಹಿಂದೆ ಇದೇ ತರಹ ದೊಡ್ಡ ಕಾಸರ್ಕಣ ಮರ ಕೂಡ ತಿರುಗಿ ಬಿದ್ದು ದೈವಗಳು ತಮ್ಮ ಗುಡಿಗಳನ್ನು ರಕ್ಷಿಸಿ ಕೊಂಡು ತಮ್ಮ ಕಾರ್ಣಿಕ ವನ್ನು ತೋರಿಸಿಕೊಟ್ಟಿದೆ ಎಂದು ಭಕ್ತರು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.