April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬಾನಾಡಿಗಳ ಬಾಯಾರಿಕೆ ಇಂಗಿಸಲು ಎಸ್ ಡಿ ಎಮ್ ನಲ್ಲಿ ವಿಶೇಷ ಯೋಜನೆ

ಉಜಿರೆ: ಬೇಸಿಗೆಯ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವ ಈ ದಿನಗಳಲ್ಲಿ ಪ್ರಕೃತಿಯ ಸೂಕ್ಷ್ಮ ಜೀವ ಪ್ರಭೇದಗಳಾದ ಪಕ್ಷಿಗಳು ನೀರು ಮತ್ತು ಆಹಾರದ ಕೊರತೆಯಿಂದಾಗಿ ಬವಣೆ ಅನುಭವಿಸುವಂಥಾಗಿದೆ.
ನದಿ, ಕೆರೆ, ಜಲಮೂಲಗಳು ಬತ್ತಿ ಹೋಗುತ್ತಿರುವ ಈ ಸಂದರ್ಭದಲ್ಲಿ ಜನರೇ ಪರದಾಡುತ್ತಿರುವಾಗ ಬಾನಾಡಿಗಳು ಆಹಾರ ಮತ್ತು ನೀರಿನ ಕೊರತೆಯಿಂದ ತೀರ ಸಂಕಷ್ಟವನ್ನು ಎದುರಿಸುವ ಹಾಗಾಗಿದೆ.
ಪಕ್ಷಿಗಳ ಈ ಬವಣೆಯನ್ನು ನೀಗಲು ಉಜಿರೆಯ ಎಸ್ ಡಿ ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಬಾನಾಡಿಗಳ ಬಾಯಾರಿಕೆ ಇಂಗಿಸುವ ಒಂದು ವಿಶೇಷ ಯೋಜನೆಯನ್ನ ರೂಪಿಸಲಾಗಿದ್ದು ಆ ಪ್ರಕಾರ ಕಾಲೇಜಿನ ಆವರಣದಲ್ಲಿರುವ ಮರಗಳಲ್ಲಿ ಹಾಗೂ ವಿದ್ಯಾರ್ಥಿಗಳ ಮನೆಗಳಲ್ಲಿ ಬರ್ಡ ಫೀಡರ್ ಗಳನ್ನು ಅಳವಡಿಸಿ ಅದರಲ್ಲಿ ನೀರು ಮತ್ತು ಧಾನ್ಯವನ್ನ ಹಾಕಿ ಹಕ್ಕಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಬರ್ಡ್ ಫೀಡರ್ಗಳಿಗೆ ನೀರನ್ನು ತುಂಬಿ ಆಹಾರದ ಕಾಳುಗಳನ್ನ ಹಾಕುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಏ ಕುಮಾರ ಹೆಗ್ಡೆ ಅವರು ಈ ಯೋಜನೆಯನ್ನು ಉದ್ಘಾಟಿಸಿ ಪ್ರಕೃತಿ , ಪರಿಸರ, ಪಕ್ಷಿಗಳು ಮತ್ತು ಮನುಷ್ಯರ ನಡುವೆ ಇರುವ ಸಂಬಂಧವನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಿದರು.
ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ :ಎಸ್.ಡಿ.ಎಂ ಪ್ರತಿಪಾದನೆಗೆ ರಾಷ್ಟಮಟ್ಟದ ಮನ್ನಣೆ

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮುಂಡಾಜೆ ಶಾಲಾ ವಿದ್ಯಾರ್ಥಿಗಳಾದ ಚಿನ್ಮಯಿ, ಸಮೃದ್ಧಿರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ಕೊಯ್ಯೂರು, ಕಳಿಯ, ನ್ಯಾಯತರ್ಪು, ಮತ್ತು ನಾಳ ಭಕ್ತಾದಿಗಳಿಂದ ಹಸಿರು ವಾಣಿ ಸಮರ್ಪಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ಅರಸಿನಮಕ್ಕಿ ರೇಣುಕಾ ಸುಧೀರ್ ಇವರ “ಮರುಗದಿರು ಮನವೇ” ಕೃತಿ ಲೋಕಾರ್ಪಣೆ

Suddi Udaya

ವೇಣೂರು: ಕೃಷಿಕ ಕೆ. ಹಸನಬ್ಬ ನಿಧನ

Suddi Udaya
error: Content is protected !!