24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorizedಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿ ಪ್ರಭಾಕರ್ ಹೆಗ್ಡೆಯವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆಯೊಬ್ಬರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮೇ.14ರಂದು ನಡೆದಿದೆ.

ಘಟನೆ ವಿವರ: ಮಹಿಳೆ ಹಾಗೂ ಆಕೆಯ ಪತಿಗೆ ಆರೋಪಿ ಉಜಿರೆಯ ಟೆಕ್ಸ್ ಟೈಲ್ಸ್ ಉದ್ಯಮಿ ಪ್ರಭಾಕರ್ ರವರು ಅವರ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ, ಅವರ ಮನೆಯಲ್ಲಿಯೇ ಆಶ್ರಯ ನೀಡಿ ಇಂದು ಬೆಳಿಗ್ಗೆ 8-30 ಗಂಟೆಗೆ ಮಹಿಳೆಯನ್ನು ಆರೋಪಿಯು ಧರ್ಮಸ್ಥಳ ದಲ್ಲಿರುವ ಅವರ ಸಂಸ್ಥೆಗೆ ಕೆಲಸಕ್ಕೆ ಬಿಡುವುದಾಗಿ ತಿಳಿಸಿ ರೆಂಜಾಳ ಎಂಬಲ್ಲಿನ ತನ್ನ ಮನೆಯಿಂದ ಮಹಿಳೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕಾರು ಚಲಾಯಿಸುತ್ತಾ ಧರ್ಮಸ್ಥಳ ಮಾರ್ಗವಾಗಿ ಚಲಿಸದೇ ಕಿಡ್ನಾಪ್‌ ಮಾಡಿ ಕಕ್ಕಿಂಜೆ ಮಾರ್ಗವಾಗಿ ಕಾರನ್ನು ಚಲಾಯಿಸಿಕೊಂಡು ಹೋದಾಗ ಮಹಿಳೆಗೆ ಸಂಶಯ ಬಂದು ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಗಂಡನಿಗೆ ಹೇಗೂ ಕೆಲಸ ಕೊಟ್ಟಿದ್ದಿನಲ್ಲಾ ಎಂದು ಹೇಳುತ್ತಾ ಲೈಂಗಿಕ ದೌರ್ಜನ್ಯ ಮತ್ತು ಅವಮಾನಕರವಾಗಿ ವರ್ತಿಸಿದಾಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಕೆಲವರು ಅಲ್ಲಿಗೆ ಬರುವುದನ್ನು ಕಂಡು ಸ್ವಲ್ಪ ಮುಂದೆ ಹೋಗಿ ಕಾರಿನಿಂದ ಇಳಿಸಿ ಆರೋಪಿಯು ಹೊರಟು ಹೋಗಿರುತ್ತಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರ ತನಿಖೆಯ ನಂತರವೇ ತಿಳಿದುಬರಬೇಕಿದೆ.

Related posts

ನಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಕಳೆಂಜ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಕುರಿತು ಬಿಜೆಪಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ

Suddi Udaya

ಜು.6: ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ದ.ಕ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘ ರಚನೆ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!