ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಉಜಿರೆ:ಅನಾಥ ಶವವನ್ನು ಪೊಲೀಸರಿಗೆ ಒಪ್ಪಿಸಿದ ಸ್ವಯಂಸೇವಕರು

ಬೆಳ್ತಂಗಡಿ: ಉಜಿರೆ ದೂರವಾಣಿ ವಿನಿಮಯ ಕೇಂದ್ರದ ಸಮೀಪ ಶುಕ್ರವಾರ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.ಮಡಿಕೇರಿ ಕುಶಾಲನಗರ ಮೂಲದ ತಮ್ಮಯ್ಯ (55) ಉಜಿರೆಯಲ್ಲಿ ಬಹಳ ಸಮಯದಿಂದ ವಾಸವಿದ್ದರು. ಅವರು ಬಸ್‌ ತಂಗುದಾಣ, ಅಂಗಡಿಗಳು ಮುಚ್ಚಿದಾಗ ಅವುಗಳ ಮುಂಭಾಗದಲ್ಲಿ, ಬಿಎಸ್ಸೆನ್ನೆಲ್‌ ಕಚೇರಿ ಪಕ್ಕದಲ್ಲಿ ವಸತಿ ಹೂಡಿ ದಿನ ಕಳೆಯುತ್ತಿದ್ದರು.ಆದರೆ ಅವರ ವಾರಸುದಾರರ ಕುರಿತು ಈ ಪರಿಸರದ ಯಾರಿಗೂ ಮಾಹಿತಿ ಇಲ್ಲ. ಶುಕ್ರವಾರ ಸಂಜೆ ಇವರ ಮೃತದೇಹ ದೂರವಾಣಿ ವಿನಿಮಯ ಕೇಂದ್ರದ ಬಳಿ ಪತ್ತೆಯಾಗಿದೆ. ಈ ಬಗ್ಗೆ ಉಜಿರೆ ಬೆಳಾಲು ಘಟಕದ ಶೌರ್ಯ ವಿಪತ್ತು ಸ್ವಯಂಸೇವಕರಾದ ರವೀಂದ್ರ, ಸುಧೀರ್‌ ಹಾಗೂ ರಾಘವೇಂದ್ರ ಇವರು ತತ್‌ಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

6.65 ಲಕ್ಷ ರೂ. ಹಣ ಪತ್ತೆ
ಪೊಲೀಸರ ಸಮ್ಮುಖದಲ್ಲಿ ಕುಟುಂಬದವರ ಪತ್ತೆಗಾಗಿ ವ್ಯಕ್ತಿಯ ಮೃತದೇಹದ ಬಳಿ ಇದ್ದ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಹಣ ಪತ್ತೆಯಾಗಿದೆ. ಇದನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ. ವ್ಯಕ್ತಿಯು ಕೂಲಿ ಕೆಲಸ ಮಾಡಿ ಸಂಗ್ರಹಿಸಲಾಗಿದ್ದ ಮೊತ್ತವಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಪತ್ತು ನಿರ್ವಹಣ ಯೋಜನಾಧಿಕಾರಿ ಜೈವಂತ ಪಟಗಾರ್‌ ಉಪಸ್ಥಿತರಿದ್ದು, ತಂಡದ ಸದಸ್ಯರಿಗೆ ನಿರ್ದೇಶನ ನೀಡಿದ್ದರು. ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ

Related posts

ಧರ್ಮಸ್ಥಳ ಬುರುಡೆ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಲ್ಲಿ ವರದಿಯ ವಿಚಾರಣೆ

Suddi Udaya

ಯಕ್ಷ ಭಾರತಿ ಕನ್ಯಾಡಿ ವತಿಯಿಂದ ಮುಖವರ್ಣಿಕೆಯ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿರುವ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಆಹ್ವಾನ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya

ಜೂ.15: ಮಡಂತ್ಯಾರ್‌ನಲ್ಲಿ ಆಲ್ಕೋಹಾಲಿಕ್ಸ್ ಅನೋನಿಮಸ್ (ಎ.ಎ) ಗ್ರೂಪ್‌ನ ಆರಂಭ: ಫಾ. ಸ್ಟಾನಿ ಗೋವಿಯಸ್

Suddi Udaya
error: Content is protected !!