ಬೆಳಾಲು: 2022-23 ಸಾಲಿನ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಾಚಾರ ಮಂಡನೆ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ವಕೀಲರು ಬೆಳಾಲು ವಹಿಸಿ, ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ನುಡಿದರು. ವಾರ್ಷಿಕ ಲೆಕ್ಕ ಪತ್ರವನ್ನು ದೇವಸ್ಥಾನದ ಲೆಕ್ಕ ಪರಿಶೋಧಕರಾದ ಸಿಎ ಬ್ಯಾಂಕ್ ಮೇನೇಜರ್ ನಾರಾಯಣ ಗೌಡ ಎಳ್ಳುಗದ್ದೆ ಮಂಡಿಸಿದರು. ವಾರ್ಷಿಕ ವರದಿ ವಾಚನವನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ವಾಚಿಸಿದರು.
ಮಹಾಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಜೀವಂದರ ಕುಮಾರ್ ಜೈನ್ ಬೆಳಾಲು ಗುತ್ತು, ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರ್, ಭಜನಾ ಮಂಡಳಿ ಕಾರ್ಯದರ್ಶಿ ಹರೀಶ್ ಕುದ್ದಂಚೆ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಗೌರವಾಧ್ಯಕ್ಷೆ ವಿದ್ಯಾಶ್ರೀನಿವಾಸ ಗೌಡ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಸತೀಶ ಗೌಡ ಎಳ್ಳುಗದ್ದೆ ಧನ್ಯವಾದವಿತ್ತು, ಕಛೇರಿ ನಿರ್ವಾಹಕ ಶಿವಪ್ರಸಾದ್ ಕೆ. ನಿರೂಪಿಸಿದರು.
ಮಹಾಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಊರವರು ಹಾಜರಿದ್ದರು..