April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಚಾರ್ಮಾಡಿ, ಕಡಿರುದ್ಯಾವರ ಕಾಡಾನೆ ಹಾವಳಿ

ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ ಘಟನೆ ನಡೆದಿದೆ.

ಹೊಸಮಠ ಪರಿಸರದ ಚಂದ್ರನ್ ಎಂಬವರ ಕೃಷಿತೋಟದಲ್ಲಿ 114 ಅಡಕೆ ಮರ, ಸಿಂಧೂ ರವಿ ಅವರ ತೋಟದ 36 ಅಡಕೆ ಮರ ಹಾಗೂ ಪುರುಷೋತ್ತಮ್ ಎಂಬುವರ ತೋಟದ 33 ಅಡಕೆ ಮರಗಳನ್ನು ಮುರಿದು ಹಾಕಿದೆ.ಕಾಡಾನೆಗಳು ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿ ಮೂಲಕ ಆಗಮಿಸಿ, ಕೃಷಿ ನಾಶಗೊಳಿಸಿದ ಬಳಿಕ ಅದೇ ಹಾದಿಯಲ್ಲಿ ಅರಣ್ಯದ ಕಡೆ ನಿರ್ಗಮಿಸಿರುವ ಕುರುಹುಗಳು ಪತ್ತೆಯಾಗಿವೆ.

ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಸರದಲ್ಲಿ ಪರಿಶೀಲನೆ ನಡೆಸಿ ಪರಿಹಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದೆ.

ಕಡಿರುದ್ಯಾವರ ಒಂಟಿ ಸಲಗ: ಬುಧವಾರ ತಡರಾತ್ರಿ ಕಡಿರುದ್ಯಾವರ ಗ್ರಾಮದ ಸಿರಿಬೈಲು ಕಿರಣ ಹೆಬ್ಬಾರ್ ರವರ ತೋಟಕ್ಕೆ ದಾಳಿ ನಡೆಸಿದ ಒಂಟಿ ಸಲಗ ಸುಮಾರು 15ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೈದಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಇನ್ನೊಬ್ಬ ಕೃಷಿಕರ ತೋಟಕ್ಕೆ ಒಂಟಿ ಸಲಗ ಆಗಮಿಸಿದ್ದರು ಹೆಚ್ಚಿನ ಕೃಷಿ ನಾಶ ಮಾಡಿರಲಿಲ್ಲ.ಬುಧವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಂಡು ಬಂದ ಒಂಟಿ ಸಲಗ ಹಲವು ಹೊತ್ತು ಟ್ರಾಫಿಕ್ ಜಾಮ್ ಗೆ ಕಾರಣವಾಗಿತ್ತು.

Related posts

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya

ಬಳಂಜ ಶ್ರೀ ಗಣೇಶೋತ್ಸವ ಪೂರ್ವಭಾವಿ ಸಭೆ, ವಿವಿಧ ಸಮಿತಿಗಳ‌ ರಚನೆ

Suddi Udaya

ಡಾ ರವೀಶ್ ಪಡುಮಲೆಗೆ ಅಕ್ಷಯ ಗುರು ಪುರಸ್ಕಾರ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ” ಉದ್ಘಾಟನೆ

Suddi Udaya

ಸಾಮಾಜಿಕ ಜಾಲಾತಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ವಿರುದ್ಧ ನಿಂದನಾತ್ಮಕ ಹೇಳಿಕೆ ಪ್ರಸಾರ ಆರೋಪ : ಖಾಸಗಿ ವೆಬ್ ನ್ಯೂಸ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಕಳಿಯ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ 5 ನೇ ವರ್ಷದ ವಾರ್ಷಿಕೋತ್ಸವ

Suddi Udaya
error: Content is protected !!