ವೇಣೂರು: ಮರೋಡಿ ಗ್ರಾಮದ ಕಾಂತಾರಬೈಲು ಮನೆಯ ಅಜಿದ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದ್ದು ದಾಳಿ ನಡೆಸಿ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಕೂಡಲೇ ಆಗಮಿಸಿ ಆರೋಪಿಯನ್ನು ಪತ್ತೆಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಕೆಲವಡೆ ನಡೆಯುವ ಅಕ್ರಮ ಕಾಸಾಯಿಖಾನೆ ನಡೆಸುವುವವರನ್ನು ಪತ್ತೆ ಹಚ್ಚಿ ಅವರ ಆವರಣವನ್ನು ಮುಟ್ಟುಗೋಲು ಹಾಕಬೇಕು. ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವೇಣೂರು ಪೋಲೀಸ್ ಠಾಣೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡ ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,ಬಜರಂಗದಳ ಜಿಲ್ಲಾ ಸಹ ಸಂಯೋಜಕ ಗುರುರಾಜ್ ಬಂಟ್ವಾಳ, ವೇಣೂರು ಪ್ರಖಂಡ ಬಜರಂಗದಳ ಸಂಯೋಜಕ ಸಂತೋಷ್ ಮಂಜಿಲ ಮತ್ತು ಪ್ರಮುಖರಾದ ಸಂತೋಷ್ ಕೊಕ್ರಾಡಿ,ನಿರಂಜನ್ ಕೊಕ್ರಾಡಿ ಹಾಗೂ ಸಂಘಟನೆಯ ಸದಸ್ಯರು ಇದ್ದರು.