25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದಂತ ವೈದ್ಯಕೀಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ

ಬೆಳ್ತಂಗಡಿ: ಕಳೆದ ಸಾಲಿನ ದಂತ ವೈದ್ಯಕೀಯದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ನಾಲ್ಕು Rank ಗಳನ್ನು ಪಡೆದು ಬೆಳ್ತಂಗಡಿಗೆ ಕೀರ್ತಿ ತಂದಿರುತ್ತಾರೆ.

ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ,ಫಿಜಿಯೋಲಾಜಿ ಮತ್ತು ಬಯೋಕೆಮೆಸ್ಟ್ರಿ,ಡೆಂಟಲ್ ಮೆಟೇರಿಯಲ್ಸ್ ಮತ್ತು ಕ್ಲಿನಿಕಲ್ ಪ್ರೊಸ್ಟೋಡೆಂಟಿಕ್ಸ್ ಈ ವಿಷಯಗಳಲ್ಲಿ ರ್ಯಾಂಕ್ ಪಡೆದಿರುವ ಇವರು ಎಂ.ಡಿ.ಎಸ್.ಕೋರ್ಸ್ ಮಾಡುವ ಇಚ್ಛೆ ವ್ಯಕ್ತಪಡಿಸಿರುತ್ತಾರೆ. ಲಾಯಿಲ ಸೈಂಟ್ ಮೇರೀಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ಮೂಡಬಿದ್ರೆಯ ಎಕ್ಸೆಲೆಂಟ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ.

ಶ್ರೀ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು,ಕೆಂಗೇರಿ, ಬೆಂಗಳೂರು ಇಲ್ಲಿ ತನ್ನ ದಂತ ವೈದ್ಯಕೀಯ ಕೋರ್ಸ್ ಮುಗಿಸಿರುವ ಇವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು ಹಾಗೂ ಶ್ರೀಮತಿ ಜಮೀಲಾ ಎಸ್ ಇವರ ಪುತ್ರಿ.

Related posts

ಬೆಳ್ತಂಗಡಿ ಬಿಲ್ಲವ ಸಂಘದಿಂದ ಶಿವಗಿರಿ ಮಠಕ್ಕೆ ಧಾರ್ಮಿಕ ಪ್ರವಾಸ

Suddi Udaya

ಸದ್ದು ಗದ್ದಲದೊಂದಿಗೆ ಪ್ರಾರಂಭಗೊಂಡ ಶಿರ್ಲಾಲು ಗ್ರಾಮಸಭೆ

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಆ.14: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಅರಿವಿನ ದೀವಿಗೆ ಉಪನ್ಯಾಸ

Suddi Udaya

ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿಗೆ ಶೇ.97.27 ಫಲಿತಾಂಶ : ತುಷಾರ ಬಿ.ಎಸ್ ರಾಜ್ಯಕ್ಕೆ 5 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ನೆರಿಯ ಬಾಲಕ್ಕ ಶೆಟ್ಟಿ ನಿಧನ

Suddi Udaya
error: Content is protected !!