32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ; ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ: 49 ನೇ ಯಶಸ್ವಿ ವರ್ಷದಲ್ಲಿ ಮುನ್ನಡೆಯುತ್ತಿರುವ ಲಯನ್ಸ್ ಕ್ಲಬ್ ಬೆಳ್ತಂಗಡಿ ಇಲ್ಲಿಗೆ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ ಮತ್ತು ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಮೇ.20 ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.‌ದೇವಿಪ್ರಸಾದ್ ಬೊಳ್ಮ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು.ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗ್ರೀಷ್ಮಾ‌ ವಿ.ಎಮ್, ರಶ್ಮಿತಾ ಮತ್ತು ರಕ್ಷಿತಾ‌ ಇವರನ್ನು ಪುರಸ್ಕರಿಸಲಾಯಿತು.ಅನಾರೋಗ್ಯದಿಂದ ಆರ್ಥಿಕ ತೊಂದರೆ ಎದುರಿಸುತ್ತಿರುವ ಇಬ್ಬರು ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಕಾರದ ಚೆಕ್ ನೀಡಲಾಯಿತು. ಪ್ರತಿಭಾ ಪುರಸ್ಕಾರದ ಬಗ್ಗೆ ಮೋಹನ್ ಗೌಡ ಅಭಿನಂದಿಸಿ ಮಾತನಾಡಿದರು.

ವೇದಿಕೆಯಲ್ಲಿ ಮೂಡಬಿದ್ರೆ ಲಯನ್ಸ್ ಕ್ಲಬ್‌ನ ದಿನೇಶ್ ಎಂ.ಕೆ, ಬಪ್ಪನಾಡು ಇನ್ಸ್‌ಪಾಯರ್ ‌ನ ವೆಂಕಟೇಶ್ ಹೆಬ್ಬಾರ್, ಸುಲ್ಕೇರಿ ಕ್ಲಬ್ ಅಧ್ಯಕ್ಷ ಸುಂದರ ಶೆಟ್ಟಿ ಉಪಸ್ಥಿತರಿದ್ದು ಶುಭ ಕೋರಿದರು. ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಬೆಳ್ತಂಗಡಿ ಲಯನ್ಸ್ ಕ್ಲಬ್ ದೇವಿಪ್ರಸಾದ್‌ ಬೊಳ್ಮ ಅವರ ನೇತೃತ್ವದಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.‌ ಸ್ಥಾಪಕ ಸದಸ್ಯ‌ ಎಂ.ಜಿ ಶೆಟ್ಟಿ ಶುಭಕೋರಿದರು.

ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಂತ್ಯಾಧ್ಯಕ್ಷರನ್ನು ಪರಿಚಯಿಸಿದರು. ಲಕ್ಷ್ಮಣ ಪೂಜಾರಿ ಪ್ರತಿಭಾನ್ವಿತರ ವಿವರ ನೀಡಿದರು.ಶುಭಾಶಿಣಿ ಪ್ರಾರ್ಥನೆ ಹಾಡಿದರು.ಪ್ರಭಾಕರ ಗೌಡ ಬೊಳ್ಮ ಧ್ವಜ ವಂದನೆ ನಡೆಸಿಕೊಟ್ಟರು. ದತ್ತಾತ್ರೇಯ ಗೊಲ್ಲ ನೀತಿ ಸಂಹಿತೆ ವಾಚಿಸಿದರು. ಘಟಕದ ವರದಿಯನ್ನು ಕಾರ್ಯದರ್ಶಿ ತುಕಾರಾಮ ಬಿ ನೀಡಿದರು. ರಾಮಕೃಷ್ಣ ಗೌಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಪ್ರಾಂತ್ಯಾಧ್ಯಕ್ಷರ ವತಿಯಿಂದ ದೇವಿಪ್ರಸಾದ್ ಬೊಳ್ಮ ಮತ್ತು ತುಕಾರಾಮ್ ಅವರನ್ನು ಅಭಿನಂದಿಸಿದರು.

Related posts

ಬೆಳ್ತಂಗಡಿ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತೆ ಒತ್ತಾಯಿಸಿ ಪ್ರತಾಪ್ ಸಿಂಹ ನಾಯಕ್‌ ರಿಂದ ಸಚಿವ ಭೈರತಿ ಸುರೇಶ್ ರವರಿಗೆ ಮನವಿ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಸಿಎ ಪರೀಕ್ಷೆಯಲ್ಲಿ ಉಜಿರೆಯ ಹರಿದಾಸ್ ರಾವ್ ಕೆ.ಜಿ. ಉತ್ತೀರ್ಣ     

Suddi Udaya

ಕುವೆಟ್ಟು: ದಿ| ಪ್ರಭಾಕರ ಶೆಣೈರವರ ಪತ್ನಿ ವಿದ್ಯಾವತಿ ನಿಧನ

Suddi Udaya

ಜಿಲ್ಲೆಯ ಹಾಸ್ಟೇಲ್‌ಗಳ ಸ್ಥಿತಿಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್‌ ಪ್ರಶ್ನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ.01 ರಿಂದ ಜಾತ್ರೋತ್ಸವ ಸಂಭ್ರಮ- ಮಡಿಲು ಸೇವೆ ವಿಶೇಷ: ಬಳಂಜ ಬಿಲ್ಲವ ಸಂಘದಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ- ಸಮಾಲೋಚನೆ ಸಭೆ

Suddi Udaya
error: Content is protected !!