23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಕಾಂಗ್ರೆಸ್ ಸರಕಾರ ರಚನೆ ಹಿನ್ನೆಲೆ: ಕೊಕ್ಕಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮೋತ್ಸವ

ಕೊಕ್ಕಡ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ರಚನೆಯಾಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಯಾಗಿ ಡಿ.ಕೆ.ಶಿವಕುಮಾರ್ ಮತ್ತು ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಕೊಕ್ಕಡದಲ್ಲಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಕಾರ್ಯಕರ್ತರ ಸಂಭ್ರಮೋತ್ಸವವು ಮೇ 21 ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಬಡವರಿಗೆ 5 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದನ್ನು ಆದಷ್ಟೂ ಬೇಗನೆ ಕಾರ್ಯರೂಪಕ್ಕೆ ಬರಲಿದೆ. ನಮ್ಮ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಗಳಾದಲ್ಲಿ ಸದಾ ಸಹಕಾರ ನೀಡುವುದಾಗಿ ಹೇಳಿದರು. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


ಬಳಿಕ ಕೊಕ್ಕಡದ ಜೋಡುಮಾರ್ಗದಿಂದ ಕೊಕ್ಕಡ ಪೇಟೆಯವರೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಸಂತ ಬಂಗೇರ ಮೆರವಣಿಗೆಯಲ್ಲಿ ಸಾಗಿ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಹಿತಿಂಡಿಯನ್ನು ಹಂಚಿ, ಪಟಾಕಿಯನ್ನು ಹಚ್ಚಿ ಕುಣಿದು ಕುಪ್ಪಳಿಸಿ, ಸಂಭ್ರಮ ಆಚರಿಸಿದರು.

Related posts

ರೆಖ್ಯ : ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿಗೆ ಹಾನಿ: ಶಿರಾಡಿ ಗ್ರಾಮ ವಿಕಾಸ ತಂಡ ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ ಕಾರ್ಯ

Suddi Udaya

ಮರೋಡಿ: ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಉಪನ್ಯಾಸ

Suddi Udaya

ದೇಹದಾನ ನೋಂದಣಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ವಸಂತ ಪೂಜಾರಿ ಮತ್ತು ಸುಶೀಲ ಹೆಗ್ಡೆ

Suddi Udaya

ಎಂ.ಡಿ.ಎಂ.ಎ. ಮಾದಕ ವಸ್ತು ಮಾರಾಟ: ಆರೋಪಿ ಕೊಕ್ಕಡ ನಿವಾಸಿ ಯಹ್ಯಾ ಬಂಧನ

Suddi Udaya

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya
error: Content is protected !!