April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕೊಕ್ಕಡ: ನಿವೃತ್ತ ಅಧ್ಯಾಪಕ ಕುಂ‌‌ಞಪ್ಪ ಗೌಡ ದಂಪತಿ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ: ಸಂಘ ಸಂಸ್ಥೆಗಳಿಗೆ ಧನಸಹಾಯ

ಕೊಕ್ಕಡ: ಕೊಕ್ಕಡ ಗ್ರಾಮದ ಕೊಲ್ಲಾಜೆ ಮನೆಯ ನಿವೃತ್ತ ಅಧ್ಯಾಪಕರಾದ ಶ್ರೀಮತಿ ಸುಂದರಿ ಹಾಗೂ ಕುಂ‌‌ಞಪ್ಪ ಗೌಡ ರವರು ಮನೆಯ ನವೀಕರಣ ಮಾಡಿದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆಯು ಮೇ 21 ರಂದು ನೆರವೇರಿತು.

ಈ ಸಂದರ್ಭದಲ್ಲಿ ಪಟ್ಟೂರು ಶ್ರೀರಾಮ ಶಾಲೆಗೆ ರೂ. 10,000 “ವಿದ್ಯಾನಿಧಿ” ಸಮರ್ಪಣೆ ಮಾಡಿದರು . ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ “ಮಂಗಳ ನಿಧಿ”ಯಾಗಿ ರೂ.10,000 ಮತ್ತು ಸೌತಡ್ಕ ಸೇವಾಧಾಮದಲ್ಲಿರುವ ಬೆನ್ನುಹುರಿ ಮುರಿತಕ್ಕೊಳಗಾದವರಿಗೆ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಆರ್ ಎಸ್ ಎಸ್ ನ ಉಜಿರೆ ತಾಲೂಕಿನ ಸಹ ಕಾರ್ಯವಾಹ ಪ್ರಜ್ವಲ್, ಆರ್ ಎಸ್ ಎಸ್ ನ ಉಜಿರೆ ತಾಲೂಕಿನ ಪ್ರಚಾರ ಪ್ರಮುಖ್ ಗಣೇಶ್ ಪಿತ್ತಿಲು, ಕೊಕ್ಕಡ ಮಂಡಲ ಪ್ರಮುಖ್ ಚಂದ್ರಶೇಖರ ಗಾನಗಿರಿ, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪುರಂದರ ಕೆ ಕಡೀರ ಉಪಸ್ಥಿತರಿದ್ದರು.

Related posts

ಕೊಕ್ರಾಡಿ : ಗೋಳಿಯಂಗಡಿಯಲ್ಲಿ ಸ್ಕಿಡ್‌ ಆಗಿ ಬಿದ್ದ ಬೈಕ್ : ಸವಾರರಿಗೆ ಗಾಯ

Suddi Udaya

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಆರಂಭ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ: ವನಮಹೋತ್ಸವ ಹಾಗೂ ಆರೋಗ್ಯ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಹಿರಿಯ ನಾಗರಿಕರಿಂದ ಉತ್ತರ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಭೇಟಿ

Suddi Udaya

ಗೇರುಕಟ್ಟೆ: ಮಾಜಿ ಶಾಸಕ ದಿ|ವಸಂತ ಬಂಗೇರರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Suddi Udaya
error: Content is protected !!