ನಡ: ಇಲ್ಲಿಯ ಯಾತ್ರಿಕರ ನೆಚ್ಚಿನ ತಾಣ ಗಡಾಯಿಕಲ್ಲಿಗೆ ಮೇ 23 ರಂದು ಸಂಜೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ.
ಸಂಜೆ ತಾಲೂಕಿನಾದ್ಯಂತ ಸಿಡಿಲು ಸಹಿತ ಮಳೆ ಬಂದಿದ್ದು, ಗಡಾಯಿಕಲ್ಲಿನ ಒಂದು ಭಾಗಕ್ಕೆ ಸಿಡಿಲು ಬಡಿದಿದೆ. ಇದರಿಂದಾಗಿ ಬೆಂಕಿ ಕಾಣಿಸಕೊಂಡು ಹೊತ್ತಿ ಹುರಿದಿದೆ. ಅದಾಗಾಲೆ ಮಳೆ ಆರಂಭಗೊಂಡಿದ್ದರಿಂದ ಬೆಂಕಿ ನಂದಿ ಹೋಗಿದೆ ಎಂದು ನಡ ಗ್ರಾಮದ ಸಮಾಜ ಸೇವಕ ಶ್ಯಾಮಸುಂದರ್ ತಿಳಿಸಿದ್ದಾರೆ. ಕಳೆದ ವರ್ಷವೂ ಇದೇ ಭಾಗಕ್ಕೆ ಸಿಡಿಲು ಬಡಿದು, ಕಲ್ಲಿನ ಸ್ವಲ್ಪ ಭಾಗ ಸಿಡಿದು ಹೋಗಿತ್ತು. ಆಗ ದೊಡ್ಡ ಶಬ್ದವಾಗಿ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಆದರೆ ಈ ಭಾರಿ ಅಂತಹ ಶಬ್ದ ಕೇಳಿ ಬಂದಿಲ್ಲ ಎಂದು ಶ್ಯಾಮಸುಂದರ್ ತಿಳಿಸಿದ್ದಾರೆ. ಸಿಡಿಲು ಬಡಿದು ಬೆಂಕಿ ಕಂಡು ಬಂದಾಗ ಸ್ಥಳೀಯರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.