24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಎಂಡೋಸ್ಕೋಪಿ ವಿಭಾಗ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2021 ರಿಂದಲೇ ಎಂಡೋಸ್ಕೋಪಿ ಸೇವೆ ಲಭ್ಯವಿದ್ದು, ರೋಗಿಗಳ ಅನುಕೂಲಕ್ಕಾಗಿ ಹಲವಾರು ಪೂರಕ ಸೌಕರ್ಯಗಳೊಂದಿಗೆ ನೂತನ ಎಂಡೋಸ್ಕೋಪಿ ವಿಭಾಗವನ್ನು ಮೇ.20 ರಂದು ಪ್ರಾರಂಭಿಸಲಾಯಿತು.


ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನೆಲ ಮಹಡಿಯಲ್ಲಿ ಪ್ರಸ್ತುತ ಇರುವ ಹೊರರೋಗಿ ವಿಭಾಗಗಳಲ್ಲಿ ಸ್ಥಳವಕಾಶದ ಕೊರತೆ ಇರುವುದರಿಂದ ಹಾಗೂ ರೋಗಿಗಳಿಗೆ ಇನ್ನು ಶೀಘ್ರವಾಗಿ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನೂತನವಾಗಿ ಎಂಡೋಸ್ಕೋಪಿ ವಿಭಾಗವನ್ನು ಮೊದಲ ಮಹಡಿಯಲ್ಲಿರುವ ಹೊರರೋಗಿ ವಿಭಾಗದಲ್ಲಿ ತೆರೆಯಲಾಯಿತು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಫಿಸಿಷಿಯನ್‌ಗಳಾದ ಡಾ| ಸಾತ್ವಿಕ್ ಜೈನ್, ಡಾ| ಯಶಸ್ವಿನಿ, ಡಾ| ಅಕ್ಷಯ್ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

Suddi Udaya

ವೇಣೂರು: ಪಡ್ಡಂದಡ್ಕ ಕಟ್ಟೆ ನಿವಾಸಿ ಪ್ರಗತಿಪರ ಕೃಷಿಕ ಕೆ ಮಹಮ್ಮದ್ ನಿಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಲಾಯಿಲ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳ ತೆರವು ಕಾರ್ಯಾಚರಣೆ

Suddi Udaya

ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನಲ್ಲಿ ‘ರಸ್ತೆ ಸುರಕ್ಷತೆ ಮತ್ತು ವೃತ್ತಿ ಮಾರ್ಗದರ್ಶನ’ ಬಗ್ಗೆ ಉಪನ್ಯಾಸ

Suddi Udaya
error: Content is protected !!