September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ವಾಣಿಜ್ಯ ಬೆಳೆಯಾದ ಅಡಿಕೆಗೆ ಅಂದಾಜು 88559 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕೆ ರೋಗವು ಭಾದೆ ಕಂಡುಬಂದಿರುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಅವರು ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಆರ್ಥಿಕವಾಗಿ ಅತ್ಯಂತ ಸಂಕಷ್ಟಕ್ಕೀಡಾಗಿರುವ ಬಗ್ಗೆ ಗಮನ ಸೆಳೆಯುವ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2025-26 ನೇ ಸಾಲಿನಲ್ಲಿ MIDH ಮಾರ್ಗಸೂಚಿಯನ್ವಯ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ “Special Interventions” ಎಲೆಚುಕ್ಕೆ ರೋಗದ ನಿಯಂತ್ರಣ ಕಾರ್ಯಕ್ರಮದಡಿ ಸಮಗ್ರ ರೋಗ/ಕೀಟಗಳ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರಿಗೆ ತಗಲುವ ರೂ 5000 ಗಳಲ್ಲಿ ಶೇ.30 ರಂತೆ ಪ್ರತಿ ಹೆಕ್ಟೇರಿಗೆ ರೂ.1500 ದರದಲ್ಲಿ 2 ಹೆಕ್ಟೇರ್ ರವರೆಗೆ 3000/ರೂ.860-65 ಲಕ್ಷಗಳ ಅನುದಾನ ನಿಗದಿಯಾಗಿದೆ ಈವರೆಗೂ 14115 ರೈತರಿಗೆ ರೂ.452.61 ಲಕ್ಷಗಳ ಸಹಾಯಧನ ನೀಡಲಾಗಿರುತ್ತದೆ. ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ.
ಮುಂಗಾರು ಮತ್ತು ಹಿಂಗಾರು ಮರುವಿನ್ಯಾಸಗೊಳಿಸಲಾದ ಬೆಳೆವಿಮೆ ನಮ್ಮ ಸಂಭವಿಸಿದಲ್ಲಿ ವಿಮಾ ಒದಗಿಸಲಾಗುತ್ತಿದೆ. ವುಸ್ತಕ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು ಸಸ್ಯ ನಿರ್ವಹಣೆಗೆ ಸಹಾಯಧನಕ್ಕಾಗಿ ಒಟ್ಟಾರೆ ರೂ.57776.33 ಲಕ್ಷಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ,MIDH ಮಾರ್ಗಸೂಚಿಯನ್ವಯ 30 ಸಹಾಯಧನದಂತೆ ಒಟ್ಟು ರೂ.17332.90 ಲಕ್ಷಗಳನ್ನುಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ.

ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾ ಪರಿಹಾರದಲ್ಲಿ ಹವಮಾನ ವೈಪರಿತ್ಯದಿಂದ ಆಗುವ/ ಹೆಚ್ಚಾಗುವ ರೋಗಗಳಿಂದಾಗುವ ನಷ್ಟವು ಸಹ ಪರೋಕ್ಷವಾಗಿ ಒಳಗೊಂಡಿರುತ್ತದೆ. 2024-25ನೇ ಸಾಲಿನಲ್ಲಿ ಈ ಯೋಜನೆಯಡಿ ಅಡಿಕೆ ಬೆಳೆಗೆ ವಿಮಾ ಕಂಪನಿಗಳಿಂದ ಈವರೆವಿಗೆ 365920 ಅರ್ಹ ರೈತ ಪ್ರಕರಣಗಳಿಗೆ ರೂ. 47254 13 ಲಕ್ಷ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Related posts

ತೋಟತ್ತಾಡಿ ಎಸ್. ಎನ್. ಡಿ. ಪಿ. ವತಿಯಿಂದ ಸ್ವಾತಂತ್ರ ದಿನ ಆಚರಣೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ, ಉಜಿರೆ ಎಸ್.ಡಿ.ಎಂ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಸ್ಥಾನ: ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಕೆ‌.ಮೋಹನ್ ಕುಮಾರ್ ಅವರಿಂದ ಅಭಿನಂದನೆ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಉರುವಾಲು :ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಪ್ಪರ ಮೂಹೂರ್ತ

Suddi Udaya

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಮತ್ತು ಬಂಟರ ಸಂಘ ಉಜಿರೆ ವಲಯದ ಆಶ್ರಯದಲ್ಲಿ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Suddi Udaya

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya
error: Content is protected !!