ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯ : ಆಡಳಿತಾಧಿಕಾರಿ ನೇಮಕ ಸಾಧ್ಯತೆ

Suddi Udaya

Updated on:

ಬೆಳ್ತಂಗಡಿ: ಪ್ರಪ್ರಥಮ ಬಾರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇದರ ಮೊದಲ ಎರಡುವರೆ ವರ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಧಿಕಾರವಧಿ ಮೇ 7ರಂದು ಮುಕ್ತಯವಾಗಿದೆ.       
ಹಲವಾರು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಳೆದ 2018 ರಲ್ಲಿ ನಡೆದ ಚುಣಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಒಟ್ಟು 11 ಸದಸ್ಯರನ್ನು ಒಳಗೊಂಡ ಪಂಚಾಯತ್ 7 ಬಿಜೆಪಿ ಸದಸ್ಯರು, 4 ಕಾಂಗ್ರೆಸ್ ಸದಸ್ಯರು ಗೆಲುವನ್ನು ಸಾಧಿಸಿದ್ದರು.

2018 ರಲ್ಲಿ ಚುಣಾವಣೆ ನಡೆದರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮೀಸಲಾತಿ ಗೊಂದಲ ಇದ್ದ ಕಾರಣ ಅಧಿಕಾರ ಚಲಾಯಿಸಲು ಸಾಧ್ಯವಾಗದೆ ಆಡಳಿತಾಧಿಕಾರಿ ಅಧಿಕಾರ ನಡೆಯುತ್ತಿತ್ತು. ಬಳಿಕ ಒಮ್ಮೆ ಹಿಂದುಳಿದ ವರ್ಗ ಮಹಿಳೆ ಮೀಸಲಾತಿ ಬಂದಿದ್ದು ಅದು ರದ್ದಾಗಿ ಹಿಂದುಳಿದ ವರ್ಗ ಬಿ ಮೀಸಲಾತಿ ಬಂದಿತ್ತು.ಅದು ರದ್ದಾಗಿ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿದ್ದು ಇದರಲ್ಲಿ ರಜನಿ ಕುಡ್ವ ಅಧ್ಯಕ್ಷರಾಗಿ, ಜಯಾನಂದ ಗೌಡ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದು ಇದೀಗ ಅವರ ಅಧಿಕಾರ ಕೊನೆಗೊಂಡಿದೆ.ಜಯಾನಂದ ಗೌಡ ಅಧ್ಯಕ್ಷರಾಗಬೇಕು ಎಂದು ಮಾತು ಕೇಳಿ ಬಂದಿದ್ದರು ಮೀಸಲಾತಿಯಿಂದ ಕೈ ತಪ್ಪಿತ್ತು. ಇದೀಗ ಮತ್ತೆ ಯಾವ ಮೀಸಲಾತಿ ಬರುತ್ತದೆ ಎಂದು ಕಾದುನೋಡಬೇಕಿದೆ.                          

ಬಿಜೆಪಿ ಸರಕಾರ ಇದ್ದ ಕಾರಣ ಮೂರು ಮಂದಿ ನಾಮನಿರ್ದೇಶನರನ್ನಾಗಿ ಸರಕಾರ ನೇಮಿಸಿತ್ತು.ಇದೀಗ ಕಾಂಗ್ರೆಸ್ ಸರಕಾರ ಬಂದ ಕಾರಣ ಅವರ ಅಧಿಕಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮತ್ತೆ ಕಾಂಗ್ರೆಸ್ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿದೆ. ಅಷ್ಟರ ತನಕ  ಸರಕಾರದ ಆಡಳಿತಾಧಿಕಾರಿ ನೇಮಕ ಆದೇಶವಾಗುವ ಸಾಧ್ಯತೆ ಇದೆ.   

ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಉಪಾಧ್ಯಕ್ಷ ಅಧಿಕಾರವದಿ ಮೇ 7 ಏಳಕ್ಕೆ ಅಧಿಕಾರವಧಿ ಮುಕ್ತಾಯಗೊಂಡಿದೆ. ಜಿಲ್ಲಾಧಿಕಾರಿಗಳು ಅಡಳಿತಾಧಿಕಾರಿ ನೇಮಕಕ್ಜೆ ಸರಕಾರಕ್ಕೆ ಪತ್ರ ಬರೆದಿದ್ದು ಸರಕಾರದ ಅದೇಶಕ್ಕೆ ಕಾಯಲಾಗುತ್ತಿದೆ. ಇನ್ನು ಮೂರು ನಾಮನಿರ್ದೇಶಕರ ನೇಮಕ ಅದೇಶವನ್ನು ಸರಕಾರ ರದ್ದುಗೊಳಿಸಿ ಅದೇಶ ಮಾಡಿದ್ದು ಅವರ ಅಧಿಕಾರ ಕೊನೆಗೊಂಡಿದೆ.

Leave a Comment

error: Content is protected !!