ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು (ರಿ.) ವತಿಯಿಂದ ಶ್ರೀ ಧ ಮಂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ, ಉಜಿರೆ ಶ್ರೀಸಿದ್ಧವನ ಗುರುಕುಲದಲ್ಲಿ ವ್ಯಕ್ತಿತ್ವ ವಿಕಸನದ ಕಾರ್ಯಾಗಾರ ಜರಗಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಉಜಿರೆ ಶ್ರೀಧ ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಎಸ್ ಸತೀಶ್ಚಂದ್ರರವರು ಮಾತನಾಡುತ್ತಾ, ತರಬೇತಿಯ ಮೂಲಕ ಪರಸ್ಪರ ಪರಿಚಯ ಮತ್ತು ವಿಚಾರ ವಿನಿಮಯ ಮಾಡುವುದರೊಂದಿಗೆ ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯ. ಜೊತೆಗೆ ಮಾನವ ಸಂಪನ್ಮೂಲದ ಬಳಕೆ ಮತ್ತು ವ್ಯಕ್ತಿತ್ವದ ವಿಕಾಸ ಸಾಧ್ಯವಾಗುತ್ತದೆ. ವೃತ್ತಿಶೀಲತೆ ಬೆಳವಣಿಗೆಯಾಗುತ್ತದೆ. ಸಂಸ್ಥೆಯ ಪ್ರತಿಯೊಬ್ಬ ನೌಕರರೂ ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು. ವೃತ್ತಿ ಗೌರವವನ್ನು ಕಾಪಾಡಿಕೊಂಡು ಸ್ವಾಭಿಮಾನಿಯಾಗಿ ಆತ್ಮಾಭಿಮಾನಿಯಾಗಬೇಕು. ಬದಲಾದ ಕಾಲಕ್ಕೆ ಅನುಗುಣವಾಗಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ವೇದಿಕೆಯಲ್ಲಿ ವಿವಿಧ ಶ್ರೀ ಧ ಮಂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ. ಕುಮಾರ ಹೆಗ್ಡೆ, ಡಾ. ಪ್ರಶಾಂತ್ ಶೆಟ್ಟಿ, ಡಾ. ಪ್ರಮೋದ್ ಕುಮಾರ್, ಸುನಿಲ್ ಪಂಡಿತ್, ಡಾ. ಅಶೋಕ್ ಕುಮಾರ್, ಡಾ. ವಿಶ್ವನಾಥ್, ತರಬೇತುದಾರ ಜೇಸಿ ಸತೀಶ್ ಭಟ್ ಬಿಳಿನೆಲೆಯವರು ಉಪಸ್ಥಿತರಿದ್ದರು.
ಶ್ರೀ ಧ ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಬೆಳಾಲು ಶ್ರೀ ಧ ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯರು ಧನ್ಯವಾದ ಸಲ್ಲಿಸಿದರು.