25.7 C
ಪುತ್ತೂರು, ಬೆಳ್ತಂಗಡಿ
May 19, 2025
ಧಾರ್ಮಿಕ

ಮೇಲಂತಬೆಟ್ಟು ಶ್ರೀ ದೇವಿಭಗವತಿ ಅಮ್ಮನವರ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ

ಮೇಲಂತಬೆಟ್ಟು: ಎ.3ರಿಂದ ಎ.7ರವರೆಗೆ ಅಷ್ಟಬಂದ ಬ್ರಹ್ಮಕಲಶೋತ್ಸವ ನಡೆದ ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ದೇವಿ ಭಗವತಿ ಅಮ್ಮವರಿಗೆ ದೃಢಕಲಶಾಭಿಷೇಕವು ಮೇ 25 ರಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಿತು.


ದೇವಸ್ಥಾನದ ಪುನರ್‌ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ಕಳೆದ ಎ.3ರಿಂದ ಎ.7ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಕ್ತಾಧಿಗಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಮತ್ತು ಗರುವಾಯನಕೆರೆ ವಲಯ

ಇವರ ಸಹಕಾರದಲ್ಲಿ ವೈಭವ ಪೂರ್ಣವಾಗಿ ಜರುಗಿತ್ತು.
ಇದೀಗ ನಲ್ವತ್ತೆಂಟು ದಿನಗಳು ಕಳೆದಿದ್ದು, ದೃಢಕಲಶದ ಅಂಗವಾಗಿ ಪೂರ್ವಾಹ್ನ ೮ಕ್ಕೆ ಗಣಹೋಮ, 10ಕ್ಕೆ ದೃಢಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ.

ವೀರೇಂದ್ರ ಹೆಗ್ಗಡೆಯವರು ಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀ ದೇವಿಭಗವತಿ ಅಮ್ಮನವರ ದರ್ಶನ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ಡಾ. ಹೆಗ್ಗಡೆಯವರನ್ನು ಪೂರ್ಣಕುಂಭದೊಂದಿಗೆ ಕ್ಷೇತ್ರದ ಆಡಳಿತ ಮೋಕ್ತೇಸರ ಯೋಗೀಶ್ ಪೂಜಾರಿ ಇವರ ನೇತೃತ್ವದಲ್ಲಿ

ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ಪೂಜಾ ಮತ್ತು ಭಜನಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹೋಮಕುಂಡದ ಭೂಮಿ ಪೂಜೆ

Suddi Udaya

ಪಿಲಿಚಾಮುಂಡಿಕಲ್ಲಿನಲ್ಲಿ ಭಕ್ತಿ -ಭಾವ ಸಂಭ್ರಮದಿಂದ ಆದ್ದೂರಿಯಾಗಿ ನಡೆದ ದೊಂಪದಬಲಿ ಉತ್ಸವ

Suddi Udaya

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಹಿಂದೂ ಮಲಯಾಳಿ ಕೇರಳ ಓಣಂ ಆಚರಣೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ, ಓಣಂ ವಿಶೇಷ ಪೋಕಳಂ ಭೋಜನ ಕೂಟ

Suddi Udaya

ಎ.10-14: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಬೆಳ್ತಂಗಡಿ ಸಂತ ಲಾರೆನ್ಸರ ಮಹಾದೇವಲಯದಲ್ಲಿ ಪಾಸ್ಕ ಹಬ್ಬದ ಆಚರಣೆ

Suddi Udaya

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

Suddi Udaya
error: Content is protected !!