April 2, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ: ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಢಿಕ್ಕಿ: ಸಾಗರದ ವಿನೋದ್‌ರಿಗೆ ಗಂಭೀರ ಗಾಯ

ಚಾರ್ಮಾಡಿ: ಇಲ್ಲಿಯ ಚಾರ್ಮಾಡಿಯ ಕೃಷ್ಣನಗರ ಪಾಂಡಿಕಟ್ಟೆಯಲ್ಲಿ ಪ್ರಯಾಣಿಕರ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವರು ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸಾಗರ ಕಡೆಯಿಂದ ಕುಟುಂಬವೊಂದು ಕಾರಿನಲ್ಲಿ ಬರುತ್ತಿರುವ ಸಮಯ ಕಾರು ಬ್ರೇಕ್ ಫೈಲ್ ಆಗಿ ಘಾಟಿಯ ಧರೆಗೆ ಡಿಕ್ಕಿ ಹೊಡೆಯಿತ್ತೇನ್ನಲಾಗಿದೆ. ಇದರಿಂದಾಗಿ ಕಾರಿನಲ್ಲಿದ್ದ ವಿನೋದ್ ಸಾಗರ ಎಂಬುವವರು ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೂ ಗಾಯಗಳಾಗಿದೆ.

ವಿನೋದ್ ಅವರನ್ನು ಉಜಿರೆಯ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರ ಇನ್ನಷ್ಟೇ ಲಭಿಸಬೇಕಾಗಿದೆ.

Related posts

ಹರೀಶ್ ಪೂಂಜರ ಪರ ಮತಯಾಚನೆಗೆ ಬಿರ್ವೆರ್ ಕುಡ್ಲದ ಸ್ಥಾಪಕ ಉದಯ್ ಪೂಜಾರಿ ಬಳ್ಳಾಲ್ ಬಾಗ್

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಉಜಿರೆ ಎಸ್ .ಡಿ .ಎಂ .ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಸಂಕಷ್ಟದಲ್ಲಿರುವ ಹೆಂಚು ಉದ್ಯಮ ಸೂಕ್ತ ಪರಿಹಾರ ಕ್ರಮಕ್ಕಾಗಿ ಪರಿಷತ್ ನಲ್ಲಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ

Suddi Udaya
error: Content is protected !!