28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜಕೇಸರಿ ಟ್ರಸ್ಟ್ ನಿಂದ ಸವಣಾಲು ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ,ಪೆನ್ ವಿತರಣೆ

ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಉತ್ತಮ ಪರಿಸರದ ವಾತಾವರಣ ಇದೆ. ಇದರಿಂದ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಆರೋಗ್ಯ ಸಿಗಲು ಸಾದ್ಯ. ಕೆಲವೊಂದು ಸೌಲಭ್ಯಗಳ ಕೊರತೆ ಇದ್ದು ಇದನ್ನು ಊರವರು ,ದಾನಿಗಳು ನೀಡಲು ಮುಂದಾಗಬೇಕು .ಇಂದು ರಾಜಕೇಸರಿ ಟ್ರಸ್ಟ್ ಬ್ಯಾಗ್, ಪುಸ್ತಕ, ಇನ್ನಿತರ ಕೊಡುಗೆ ನೀಡಿ ಸರಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಸರಕಾರಿ ಶಾಲಾ ಸೇವೆ ದೇವರ ಸೇವೆ ಮಾಡಿದಂತೆ ಎಂದು ದಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು.

ಅವರು ಜು.6ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತನಬೈಲು ಸವಣಾಲು ಇಲ್ಲಿನ ಮಕ್ಕಳಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್ ,ಪೆನ್ನು ವಿತರಿಸಿ ಮಾತನಾಡಿ ಹಿಂದೆ ಸರಕಾರಿ ಶಾಲೆಯಲ್ಲಿ ಕಲಿತವರು ಅನೇಕರು ದೊಡ್ಡ ದೊಡ್ಡ ಅಧಿಕಾರಗಳು, ರಾಜಕಾರಣಿಗಳು , ವಿದ್ವಾಂಸರು ರಾಗಿ ಬೆಳೆದಿದ್ದಾರೆ. ಆದ್ದರಿಂದ ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ .ಶಾಲೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇದ್ದು ಊರವರು ಸೇರಿ ಮಾದರಿ ಕಾರ್ಯಕ್ರಮ ಮಾಡಬೇಕು ನಾನು ನೆರವನ್ನು ನೀಡಲು ಸಿದ್ದ ಎಂದರು.

ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ ಸರಕಾರಿ ಶಾಲೆ ಬೆಳವಣಿಗೆ ಪೋಷಕರು, ಹಳೆವಿದ್ಯಾರ್ಥಿಗಳ ಕೊಡುಗೆ ಅಗತ್ಯ. ಪೋಷಕರು ನಿರಂತರ ಶಾಲೆಗೆ ಬೇಟಿ ನೀಡುವ ಮೂಲಕ ಮಕ್ಕಳ ಶಿಕ್ಷಣದ ಕಡೆ ಮತ್ತು ಶಾಲೆಯ ಬೆಳವಣಿಗೆಗೆ ಗಮನ ಹರಿಸಬೇಕು ಎಂದರು.

ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ಪ್ರಭಾಕರ್ ಭಟ್ ಅದ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಶಾಲೆಯನ್ನು ಗುರುತಿಸಿ ರಾಜಕೇಸರಿ ಟ್ರಸ್ಟ್ ನೆರವು ನೀಡಲು ಮುಂದಾಗಿದ್ದು ಮಕ್ಕಳಿಗೆ ಅನುಕೂಲವಾಗಿದೆ. ಇಂತಹ ಸಂಘಟನೆಗಳಿಂದ ಸರಕಾರಿ ಶಾಲೆ ಬೆಳೆಯಲು ಸಾದ್ಯ ಎಂದರು.

ಕಾರ್ಯಕ್ರಮದಲ್ಲಿ ಮೇಲಂತಬೆಟ್ಟು ಗ್ರಾ ಪಂ ಉಪಾಧ್ಯಕ್ಷ ಲೋಕನಾಥ್ ಶೆಟ್ಡಿ, ರಾಜಕೇಸರಿ ಟ್ರಸ್ಟ್ ನ ಸ್ಥಾಪಕಾದ್ಯಕ್ಷ ದೀಪಕ್ ಜಿ, ತಾಲೂಕು ಅದ್ಯಕ್ಷ ಸತೀಶ್ ಕಂಗಿತ್ತಿಲ್, ಗೌರಾವದ್ಯಕ್ಷರಾದ ಸಂದೀಪ್ ಬೆಳ್ತಂಗಡಿ , ಪ್ರೇಮ್ ರಾಜ್ ಲಾಯಿಲ,ಪದಾದಿಕಾರಿಗಳಾದ ಜಗದೀಶ್ ಲಾಯಿಲ, ಶರತ್ ಕರಾಯ,ದೇವರಾಜ್ ಪೂಜಾರಿ, ವಿನೋದ್ ಲಾಯಿಲ ಉಪಸ್ಥಿತರಿದ್ದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ನಮಿತಾ ಆರ್ ಸ್ವಾಗತಿಸಿ ಸಹಶಿಕ್ಷಕ ವಸಂತ ಗುಡಿಗಾರ್ ವಂದಿಸಿದರು. ಸಹಶಿಕ್ಷಕಿ ಶ್ಯಾಮಲಾ ಕೆ ನಿರೂಪಿಸಿದರು.49 ಮಕ್ಕಳಿಗೆ ಉಚಿತ ಬ್ಯಾಗ್ ,ಪೆನ್ ಕಿಟ್ ವಿತರಿಸಲಾಯಿತು

Related posts

ಸೆ.15 ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡರಿಂದ ಪ್ರಚಾರಕ್ಕೆ ಚಾಲನೆ

Suddi Udaya

ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಮೋದಿಜಿ ಹುಟ್ಟುಹಬ್ಬ, ಉಜಿರೆ ಮಹಾಶಕ್ತಿ ಕೇಂದ್ರದಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಕೊಜಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!